×
Ad

ಡಿಆರ್‌ಡಿಒನಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

Update: 2025-12-15 18:46 IST

credit: gemini ai

ಪದವೀಧರ (ತಾಂತ್ರಿಕ ಮತ್ತು ತಾಂತ್ರಿಕೇತರ) ಅಪ್ರೆಂಟಿಸ್ ಮತ್ತು ತಂತ್ರಜ್ಞ ಅಪ್ರೆಂಟಿಸ್ ಸೇರಿದಂತೆ ಒಟ್ಟು 46 ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳನ್ನು ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಡಿಯಲ್ಲಿ ಬರುವ ಪ್ರಮುಖ ಸಂಶೋಧನಾ ಪ್ರಯೋಗಾಲಯವಾಗಿರುವ ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಶೋಧನಾ ಪ್ರಯೋಗಾಲಯದಲ್ಲಿ (ಡಿಎಲ್‌ಆರ್‌ಎಲ್‌) ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಸೂಚನೆಯನ್ನು ಹೊರಡಿಸಿದೆ.

ಪದವೀಧರ (ತಾಂತ್ರಿಕ ಮತ್ತು ತಾಂತ್ರಿಕೇತರ) ಅಪ್ರೆಂಟಿಸ್ ಮತ್ತು ತಂತ್ರಜ್ಞ ಅಪ್ರೆಂಟಿಸ್ ಸೇರಿದಂತೆ ಒಟ್ಟು 46 ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳನ್ನು ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಅಪ್ರೆಂಟಿಸ್ ತರಬೇತಿಗಳಿಗೆ ಸೇರ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.

ಲಿಂಕ್: https://nats.education.gov.in/

ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಂಡು, ನಿಗದಿತ ವಿಳಾಸದಲ್ಲಿ ನಡೆಯುವ ವಾಕ್‌ ಇನ್ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.

ನೋಂದಣಿಯ ಪ್ರಮುಖ ದಿನಾಂಕ:

ವಾಕ್‌-ಇನ್ ಸಂದರ್ಶನದ ದಿನಾಂಕ: ಡಿಸೆಂಬರ್ 22 ಮತ್ತು 23

ಹುದ್ದೆಗಳ ವಿವರ:

ಪದವೀಧರ (ತಾಂತ್ರಿಕ) ಅಪ್ರೆಂಟಿಸ್- 30 ಹುದ್ದೆಗಳು

ತಂತ್ರಜ್ಞ ಅಪ್ರೆಂಟಿಸ್ – 06 ಹುದ್ದೆಗಳು

ಪದವೀಧರ (ತಾಂತ್ರಿಕೇತರ) ಅಪ್ರೆಂಟಿಸ್- 10 ಹುದ್ದೆಗಳು

ಒಟ್ಟು- 46 ಅಪ್ರೆಂಟಿಸ್ ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಪದವೀಧರ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿಇ/ಬಿಟೆಕ್ ಪದವಿ ಪೂರ್ಣಗೊಳಿಸಿರಬೇಕು.

ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ/ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಪದವೀಧರ (ತಾಂತ್ರಿಕೇತರ) ಅಪ್ರೆಂಟಿಸ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಕಾಂ/ಬಿಎಸ್‌ಸಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಆಂಡ್ ಲ್ಯಾಬೋರೇಟರಿ (ಡಿಎಲ್‌ಆರ್‌ಎಲ್‌) ನಿಯಮಗಳ ಪ್ರಕಾರ.

ಆಯ್ಕೆ ಪ್ರಕ್ರಿಯೆ:

ಸಂದರ್ಶನ, ದಾಖಲೆ ಪರಿಶೀಲನೆ

ಸ್ಟೈಫಂಡ್: ಪದವೀಧರ (ತಾಂತ್ರಿಕ) ಅಪ್ರೆಂಟಿಸ್ ಹುದ್ದೆಗೆ ರೂ. 12,300. ಆಯ್ಕೆಯಾದ ಅಭ್ಯರ್ಥಿಗಳಿಗೆ ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗೆ ರೂ 10,900 ಹಾಗೂ ಪದವೀಧರ (ತಾಂತ್ರಿಕೇತರ) ಅಪ್ರೆಂಟಿಸ್ ಹುದ್ದೆಗೆ ರೂ. 12,300 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

ಅಭ್ಯರ್ಥಿಗಳು ನೀಡಲಾದ ವೆಬ್‌ಸೈಟ್‌ನಲ್ಲಿ 100% ಕೆವೈಸಿಯೊಂದಿಗೆ ನೋಂದಣಿಯನ್ನು ಖಚಿತಪಡಿಸಿಕೊಳ್ಳಬೇಕು. ಹಾಗೂ ಅಭ್ಯರ್ಥಿಯ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಮತ್ತು ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

ನೋಂದಣಿಯಾದ ಬಳಿಕ ಎಲ್ಲಾ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು (ಮೂಲ), ಪ್ರತಿ ಮತ್ತು ಮೀಸಲಾತಿಯ ಸಂದರ್ಭದಲ್ಲಿ ಇತರ ಪ್ರಮಾಣಪತ್ರಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿಕೊಂಡು ವಾಕ್‌-ಇನ್ ಸಂದರ್ಶನಕ್ಕೆ ಹಾಜರಾಗಬೇಕು.

ವಾಕ್‌-ಇನ್ ಸಂದರ್ಶನದ ಸ್ಥಳ:

ಅಭ್ಯರ್ಥಿಗಳಿಗೆ 2025 ಡಿಸೆಂಬರ್ 22 ಹಾಗೂ 23ರಂದು ಬೆಳಿಗ್ಗೆ 9:30ರಿಂದ 11 ಗಂಟೆಯವರೆಗೆ ಈ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ವಾಕ್‌-ಇನ್ ಸಂದರ್ಶನ ನಡೆಸಲಾಗುತ್ತದೆ.

ವಿಳಾಸ: ರಕ್ಷಣಾ ಎಲೆಕ್ಟ್ರಾನಿಕ್ಸ್, ಸಂಶೋಧನಾ ಪ್ರಯೋಗಾಲಯ (ಡಿಎಲ್‌ಆರ್‌ಎಲ್), ಚಂದ್ರಾಯನಗುಟ್ಟ, ಹೈದರಾಬಾದ್- 500005

ಅಧಿಕೃತ ವೆಬ್‌ತಾಣ: drdo.gov.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News