ಆರ್ಥಿಕ ಶಿಸ್ತು ಪಾಲನೆಯಲ್ಲಿ ಕರ್ನಾಟಕ ನಂಬರ್ ಒನ್: ಸಿಎಂ ಯಡಿಯೂರಪ್ಪ
Update: 2019-12-26 18:19 IST
ಬೆಂಗಳೂರು, ಡಿ.26: ಆರ್ಥಿಕ ಶಿಸ್ತು ಪಾಲನೆಯಲ್ಲಿ ಕರ್ನಾಟಕವೆ ನಂಬರ್ ಒನ್, ಉತ್ತಮ ಆಡಳಿತದಲ್ಲೂ ಮೂರನೇ ಸ್ಥಾನ. ಶಿಕ್ಷಣ, ಆರೋಗ್ಯ, ಆರ್ಥಿಕ ಬೆಳವಣಿಗೆ, ಕಾನೂನು ನೆರವು, ನ್ಯಾಯಾಂಗ ಸೇವೆ ಮುಂತಾದ ಹತ್ತು ವಿಭಾಗಗಳಲ್ಲಿ 50 ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರಕಾರ ಮಾಡಿರುವ ‘ಉತ್ತಮ ಆಡಳಿತ ಸೂಚ್ಯಂಕ’ವು ಉತ್ತಮ ಆಡಳಿತ ನೀಡಲು ಸ್ಫೂರ್ತಿ ಮತ್ತು ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.