7 ಮಂದಿಯನ್ನು ಹೊತ್ತ ಪ್ರವಾಸಿ ಹೆಲಿಕಾಪ್ಟರ್ ನಾಪತ್ತೆ

Update: 2019-12-27 18:59 GMT

ಲಾಸ್ ಏಂಜಲಿಸ್, ಡಿ. 27: ಅಮೆರಿಕದ ಹವಾಯಿ ರಾಜ್ಯದ ಕರಾವಳಿಯಲ್ಲಿ ಏಳು ಪ್ರವಾಸಿಗರನ್ನು ಒಯ್ಯುತ್ತಿದ್ದ ಹೆಲಿಕಾಪ್ಟರೊಂದು ಗುರುವಾರ ನಾಪತ್ತೆಯಾಗಿದೆ. ಅಮೆರಿಕದ ತಟ ರಕ್ಷಣಾ ಪಡೆಯು ಶುಕ್ರವಾರ ಹೆಲಿಕಾಪ್ಟರ್‌ಗಾಗಿ ಶೋಧ ನಡೆಸುತ್ತಿದೆ.

ಹೆಲಿಕಾಪ್ಟರ್ ವಾಯುವ್ಯದ ದ್ವೀಪ ಕವಾಯಿ ವೀಕ್ಷಣೆಗಾಗಿ ಪ್ರವಾಸಿಗರನ್ನು ಒಯ್ಯುತ್ತಿತ್ತು. ಅದು ಗುರುವಾರ ಸಂಜೆ ಮರಳಿ ಬರಬೇಕಾದ ಸಮಯ ಮೀರಿದರೂ ಮರಳದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಮಾಲೀಕನು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ತಟರಕ್ಷಣಾ ಪಡೆಯು ಒಂದು ದೋಣಿ ಮತ್ತು ಒಂದು ಹೆಲಿಕಾಪ್ಟರನ್ನು ಶೋಧ ಕಾರ್ಯಾಚರಣೆಗೆ ಕಳುಹಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News