ಯುವಶಕ್ತಿಯ ಪ್ರತಿಭಟನೆಯ ಬಲ

Update: 2020-01-09 18:15 GMT

ಇದೆಲ್ಲ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಮಗೆ ಹೇಳಲು ಸಾಧ್ಯವಿಲ್ಲ. ಆದರೆ ಅದರ ಪ್ರತಿಭಟನೆ ನಮಗೆ ಕೆಲವು ಸತ್ಯಗಳನ್ನು ಕಾಣಿಸುತ್ತಿದೆ. ಮೊದಲನೆಯದಾಗಿ ಇಂದಿನ ತಲೆಮಾರು ಕೇವಲ ಮನರಂಜನೆಯಲ್ಲಷ್ಟೇ ಆಸಕ್ತವಾಗಿದೆ ಎಂಬ ಹೇಳಿಕೆ ತಪ್ಪುಎಂದು ಅದು ತೋರಿಸಿಕೊಟ್ಟಿದೆ. ಪ್ರತಿಭಟನೆಗಳು ನಡೆದ, ನಡೆಯುತ್ತಿರುವ ಹಲವು ಕ್ಯಾಂಪಸ್‌ಗಳು ಪ್ರಧಾನವಾಗಿ ಮಧ್ಯಮ ವರ್ಗದ ವಿದ್ಯಾರ್ಥಿಗಳಿರುವ ಕ್ಯಾಂಪಸ್‌ಗಳು. ಆದರೆ ಆ ವಿದ್ಯಾರ್ಥಿಗಳು ತಮ್ಮ ಯಾವುದೇ ಸವಲತ್ತುಗಳಿಗಾಗಿ ಪ್ರತಿಭಟಿಸುತ್ತಿಲ್ಲ ಅವರು ಪ್ರಜಾಪ್ರಭುತ್ವದ ಉಲ್ಲಂಘನೆ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.


ಭಾರತದಂತಹ ಬೃಹತ್ ಗಾತ್ರ ಮತ್ತು ವಿವಿಧತೆಯ ಒಂದು ಪ್ರಜಾಪ್ರಭುತ್ವದಲ್ಲಿ ಊಹಿಸಲು ಕೂಡ ಅಸಾಧ್ಯವಾದುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಾಧಿಸಿ ತೋರಿಸಿದ್ದಾರೆ: ತಮ್ಮ ಅಧಿಕಾರಕ್ಕೆ ಎದುರಾದ ಬಹುತೇಕ ಪ್ರತಿಯೊಂದು ರಾಜಕೀಯ ಸವಾಲನ್ನೂ ಅವರು ಬಗ್ಗು ಬಡಿದಿದ್ದಾರೆ. ಭಾರತದಂತಹ ಒಂದು ಪ್ರಜಾಪ್ರಭುತ್ವದಲ್ಲಿ, ವಿಪಕ್ಷಗಳಲ್ಲದೆ ಸರಕಾರಕ್ಕೆ ಪ್ರಬಲ ಸವಾಲೊಡ್ಡುವವರೆಂದರೆ ಮೀಡಿಯಾ ಮತ್ತು ಕಾರ್ಪೊರೇಟ್ ರಂಗ. ಆಶ್ಚರ್ಯದ ಸಂಗತಿಯೆಂದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಉಲ್ಲಂಘಿಸದೆಯೇ ಹೀಗೆ ಎದುರಾಳಿಗಳನ್ನು ಬಗ್ಗು ಬಡಿಯಲಾಗಿದೆ. ಸಂಸದೀಯ ಬಹುಮತ ಅಥವಾ ಭಾರತ ಸರಕಾರಕ್ಕಿರುವ ಕಾನೂನು ರೀತ್ಯ ಅಧಿಕಾರಿಗಳನ್ನು ಬಳಸಿ ಎದುರಾಳಿಗಳನ್ನು ಮಣಿಸಲಾಗಿದೆ.

ಅದೇನಿದ್ದರೂ, ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳಿಗೆ ಪ್ರತಿಕ್ರಿಯಿಸಲು ಸಾಕಷ್ಟು ಕಾಲಾವಕಾಶ ನೀಡಬೇಕೇ ಹೊರತು ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಪಾಶವೀ ಶಕ್ತಿಯನ್ನು ಬಳಸುವುದು ಸರಿಯಲ್ಲ ಅಥವಾ ಭಿನ್ನಮತ ವ್ಯಕ್ತಪಡಿಸುವ ಪತ್ರಕರ್ತರನ್ನು, ಬುದ್ಧಿಜೀವಿಗಳನ್ನು ಬಗ್ಗುಬಡಿಯಲು ಅವರ ವಿರುದ್ಧ ಕ್ರಿಮಿನಲ್ ವಿಚಾರಣೆಯ ಬೆದರಿಕೆಯೊಡ್ಡುವುದು ಸಂಸದೀಯ ಕ್ರಮವಲ್ಲ. ತನಗೆ ಕಂಡಂತೆ ಯಾರಿಗೂ ಲೆಕ್ಕಿಸದೆ ಮೋದಿ ಸರಕಾರ ಭಾರೀ ಯಶಸ್ಸನ್ನು ಗಳಿಸಿದ ಎರಡು ಕ್ಷೇತ್ರಗಳೆಂದರೆ ಕಾಶ್ಮೀರ ಮತ್ತು ದೇಶದ ಅರ್ಥ ವ್ಯವಸ್ಥೆ.

ಸಂವಿಧಾನದ 370ನೇ ವಿಧಿಯ ರದ್ದುಪಡಿಸುವಿಕೆಯ ಮೂಲಕ ಒಂದು ರಾಜ್ಯದ ಸಾಂವಿಧಾನಿಕ ಸ್ಥಾನಮಾನವನ್ನು ಯಾವುದೇ ಮುನ್ಸೂಚನೆ ನೀಡದೆ ಬದಲಾಯಿಸುವುದೆಂದರೆ ಅದು ಅಧಿಕಾರದ ದುರುಪಯೋಗವಲ್ಲದೆ ಬೇರೇನೂ ಅಲ್ಲ. ಅದರ ಜೊತೆಗೇ ಏಕಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಿ ರಾಜ್ಯದ ಭಾಗಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಲಾಯಿತು. ಅಂತಿಮವಾಗಿ, ಅಲ್ಲಿಯ ರಾಜಕೀಯ ನಾಯಕರನ್ನು ಬಂಧಿಸಿ ಸಂಪರ್ಕ/ಸಂವಹನ ಚಾನೆಲ್‌ಗಳನ್ನು ತಡೆಹಿಡಿಯಲಾಯಿತು. ಇವೆಲ್ಲ ಸರ್ವಾಧಿಕಾರದ ಕ್ರಮಗಳೆಂದು ಹೇಳಲೇಬೇಕಾಗಿದೆ.

ದೇಶದ ಅರ್ಥ ವ್ಯವಸ್ಥೆಯ ಕುಸಿತದ ಜೊತೆ ನಿರುದ್ಯೋಗಿಗಳ ಪಾಡು ಹೇಳತೀರದಾಗಿದೆ. ಆದರೂ ಮೋದಿಯವರು ದೇಶದ ಅರ್ಥ ವ್ಯವಸ್ಥೆ ಐದು ಬಿಲಿಯ ಡಾಲರ್ ಗುರಿಯನ್ನು ಖಂಡಿತವಾಗಿಯೂ ತಲುಪುತ್ತಿದೆ ಎಂದು ಹೇಳುತ್ತಲೇ ಇದ್ದಾರೆ. ಜನರ ಉಪಭೋಗದಲ್ಲಿ ಕಡಿಮೆಯಾಗಿರುವುದಕ್ಕೆ ‘‘ತಪ್ಪುಶೋಧನೆಗಳೇ’’ ಆಧಾರವೆಂದು ಅವರು ಹೇಳುತ್ತಿದ್ದಾರೆ.

ಭಾರತದ ಇಂದಿನ ಆಳುವ ನಾಯಕರನ್ನು ಯಾವುದರಿಂದಲೂ, ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕಾಣುತ್ತಿತ್ತು. ಆದರೆ ಇದು ದೇಶದ ಯುವಶಕ್ತಿ, ಯುವಜನತೆ ಧ್ವನಿ ಎತ್ತುವವರಿಗೆ ಮಾತ್ರ. ಈಗ ಯುವಜನತೆ ಧ್ವನಿ ಎತ್ತಿದ್ದಾರೆ ಮತ್ತು ಇದರ ಪರಿಣಾಮವಾಗಿ ನಾವು ಭಾರತದ ಪ್ರಜಾಪ್ರಭುತ್ವ ಬದಲಾಗುತ್ತಿರುವುದನ್ನು ನೋಡುತ್ತಿದ್ದೇವೆ ಅನ್ನಿಸುತ್ತದೆ. ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಿಂದ ಆರಂಭಿಸಿ ವಿವಿಧ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯ ಮೂಲಕ ಸರಕಾರದ ವಿರುದ್ಧ ಎದ್ದು ನಿಂತಿದ್ದಾರೆ. ರಾಜಕೀಯ ಚಳವಳಿಗಳಲ್ಲಿ ಈ ಹಿಂದೆಯೂ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಆದರೆ ಅವುಗಳು ಸ್ಥಳೀಯ ಸೀಮಿತ ವಿಷಯಗಳಿಗಾಗಿ ನಡೆದಿದ್ದಿರಬಹುದು. 1960ರ ದಶಕದಲ್ಲಿ ಹಿಂದಿನ ಮದ್ರಾಸ್ ರಾಜ್ಯದಲ್ಲಿ ವಿದ್ಯಾರ್ಥಿಗಳು ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯಾಗಿ ಹೇರುವುದರ ವಿರುದ್ಧ ಪ್ರತಿಭಟಿಸಿದ್ದರು. ಆ ಬಳಿಕ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳವಳಿ ನಡೆಸಿದ್ದರು. 1980ರ ದಶಕದಲ್ಲಿ ಅಸ್ಸಾಮಿನ ವಿದ್ಯಾರ್ಥಿಗಳು ಚಳವಳಿ ನಡೆಸಿ ಅಸ್ಸಾಂ ಒಪ್ಪಂದ ಆಗುವಂತೆ ಮಾಡಿದ್ದರು. ಈಗ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಮ್ಮ ಭಿನ್ನಮತವನ್ನು ವ್ಯಕ್ತಪಡಿಸಿ ಒಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವಕ್ಕಾಗಿ ಚಳವಳಿ ನಡೆಸುತ್ತಿದ್ದಾರೆ. ಇದೆಲ್ಲ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಮಗೆ ಹೇಳಲು ಸಾಧ್ಯವಿಲ್ಲ. ಆದರೆ ಅದರ ಪ್ರತಿಭಟನೆ ನಮಗೆ ಕೆಲವು ಸತ್ಯಗಳನ್ನು ಕಾಣಿಸುತ್ತಿದೆ. ಮೊದಲನೆಯದಾಗಿ ಇಂದಿನ ತಲೆಮಾರು ಕೇವಲ ಮನರಂಜನೆಯಲ್ಲಷ್ಟೇ ಆಸಕ್ತವಾಗಿದೆ ಎಂಬ ಹೇಳಿಕೆ ತಪ್ಪುಎಂದು ಅದು ತೋರಿಸಿಕೊಟ್ಟಿದೆ. ಪ್ರತಿಭಟನೆಗಳು ನಡೆದ, ನಡೆಯುತ್ತಿರುವ ಹಲವು ಕ್ಯಾಂಪಸ್‌ಗಳು ಪ್ರಧಾನವಾಗಿ ಮಧ್ಯಮ ವರ್ಗದ ವಿದ್ಯಾರ್ಥಿಗಳಿರುವ ಕ್ಯಾಂಪಸ್‌ಗಳು. ಆದರೆ ಆ ವಿದ್ಯಾರ್ಥಿಗಳು ತಮ್ಮ ಯಾವುದೇ ಸವಲತ್ತುಗಳಿಗಾಗಿ ಪ್ರತಿಭಟಿಸುತ್ತಿಲ್ಲ ಅವರು ಪ್ರಜಾಪ್ರಭುತ್ವದ ಉಲ್ಲಂಘನೆ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ಎರಡನೆಯದಾಗಿ ಪ್ರತಿಭಟನೆಗಳು ನಡೆಯುತ್ತಿರುವ ಕ್ಯಾಂಪಸ್‌ಗಳು ಜಾಮಿಯ ಮತ್ತು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯಗಳಿಗಿಂತಲೂ ಹೆಚ್ಚು ವ್ಯಾಪ್ತಿ ಉಳ್ಳವುಗಳು. ಇದು ಭಾರತವನ್ನು ಭಾರೀ ಪ್ರಮಾಣದಲ್ಲಿ ಕೋಮು ಗೊಳಿಸಲಾಗಿದೆ ಎಂಬ ವಾದವನ್ನು ಸುಳ್ಳಾಗಿಸಿದೆ. ವಿದ್ಯಾರ್ಥಿಗಳು ಕೋಮು ಪರಿಗಣನೆಯನ್ನು ಮೀರಿ ಪ್ರತಿಭಟಿಸುತ್ತಿದ್ದಾರೆ. ಕೊನೆಯದಾಗಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಸ್ವಯಂ ಸ್ಫೂರ್ತ (ಸ್ಪಾಂಟೇನಿಯಸ್) ಆಗಿ ನಡೆದಿರುವ ಪ್ರತಿಭಟನೆಗಳು ಅನ್ನಿಸುತ್ತದೆ. ಎಲ್ಲ ರೀತಿಯ ರಾಜಕೀಯ ಪಕ್ಷಗಳು, ರಾಷ್ಟ್ರೀಯವಾದಿಗಳು, ಸೆಕ್ಯುಲರ್‌ವಾದಿಗಳು ಮತ್ತು ಅಸ್ಮಿತೆಗಾಗಿ ಹಪಹಪಿಸುವವರು ಎಲ್ಲರೂ ಇದನ್ನು ಗಮನಿಸಬೇಕಾಗಿದೆ.

(ಲೇಖಕರು ಅಶೋಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಮತ್ತು ಐಐಎಂ ಕೋಝಿಕ್ಕೋಡ್‌ನಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ.)
ಕೃಪೆ: ದಿ ಹಿಂದೂ

Writer - ಪುಲಪ್ರೆ ಬಾಲಕೃಷ್ಣನ್

contributor

Editor - ಪುಲಪ್ರೆ ಬಾಲಕೃಷ್ಣನ್

contributor

Similar News