ಭಾರತೀಯರು ಅಮಾಯಕರು, ಏನನ್ನೂ ನಂಬುತ್ತಾರೆ : ಪಿ.ಚಿದಂಬರಂ

Update: 2020-01-11 05:59 GMT

ಚೆನ್ನೈ: ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಹೇಳಿಕೆಗಳನ್ನು ನಂಬುವ ಭಾರತೀಯರಂಥ ಅಮಾಯಕರನ್ನು ಎಂದೂ ನೋಡಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ಸಾಹಿತ್ಯ ಉತ್ಸವವೊಂದರಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ, "ಭಾರತೀಯರಂಥ ಅಮಾಯಕರನ್ನು ನಾನು ಎಲ್ಲೂ ನೋಡಿಲ್ಲ; ಎರಡು ಪತ್ರಿಕೆಗಳಲ್ಲಿ ಬಂದರೆ ನಾವು ಅದನ್ನು ನಂಬುತ್ತೇವೆ. ಪ್ರತಿಯೊಂದನ್ನೂ ನಂಬುತ್ತೇವೆ" ಎಂದು ವಿವರಿಸಿದರು.

ಭಾರತದ ಶೇಕಡ 100ರಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ಶೇಕಡ 99ರಷ್ಟು ಮನೆಗಳಿಗೆ ಶೌಚಾಲಯ ವ್ಯವಸ್ಥೆ ಇದೆ ಎಂಬ ಸರ್ಕಾರದ ಹೇಳಿಕೆಗಳನ್ನು ಜನ ನಂಬಿದ್ದಾರೆ ಎಂದು ಅವರು ಕುಹಕವಾಡಿದರು. ಆಯುಷ್ಮಾನ್ ಭಾರತ್ ಯೋಜನೆಯ ಕಥೆಯೂ ಇದೇ ಆಗಿದೆ ಎಂದು ಚಿದಂಬರಂ ಬಣ್ಣಿಸಿದರು.

ಈ ಯೋಜನೆಯಡಿ ಯಾವುದೇ ರೋಗಗಳಿಗೆ ಹಣವಿಲ್ಲದೇ ಚಿಕಿತ್ಸೆ ಪಡೆಯಬಹುದು ಎಂದು ನಾವು ನಂಬುತ್ತೇವೆ. ನಾವು ಅಮಾಯಕರು. ಹಲವು ಸುದ್ದಿ ಹಾಗೂ ಅಂಕಿ ಅಂಶಗಳು ಸತ್ಯಕ್ಕೆ ದೂರ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News