ಪಾಕಿಸ್ತಾನ ಕೂಡ ಸಿಎಎ ರೀತಿಯ ಕಾನೂನು ಜಾರಿಗೊಳಿಸಬೇಕು ಎಂದ ಬಿಜೆಪಿ ಶಾಸಕ

Update: 2020-01-11 13:14 GMT
ಬಿಜೆಪಿ ಶಾಸಕ ವಿಕ್ರಮ್ ಸೈನಿ ( Photo: Facebook)

ಲಕ್ನೋ : ಭಾರತದಲ್ಲಿ ಜಾರಿಯಾಗಿರುವಂತಹ ಪೌರತ್ವ ತಿದ್ದುಪಡಿ ಕಾಯಿದೆಯಂತಹುದೇ ಕಾಯಿದೆಯನ್ನು ಪಾಕಿಸ್ತಾನವೂ ಜಾರಿಗೊಳಿಸಿ ಭಾರತದ 'ಬಾಧಿತ ಮುಸ್ಲಿಮರನ್ನು' ತನ್ನ ದೇಶಕ್ಕೆ ಕರೆಸಿಕೊಳ್ಳಬಹುದು ಎಂದು ಹೇಳಿ ಉತ್ತರ ಪ್ರದೇಶದ ಖಟೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ವಿವಾದಕ್ಕೀಡಾಗಿದ್ದಾರೆ.

"'ಅದ್ಲಾ ಬದ್ಲೀ ಕರ್ ಲೋ', ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೀಡಾದವರು ಭಾರತಕ್ಕೆ ಬರಬಹುದು ಹಾಗೂ ಇಲ್ಲಿ ಸಮಸ್ಯೆ ಎದುರಿಸುವವರು ಪಾಕಿಸ್ತಾನಕ್ಕೆ ಹೋಗಬಹುದು. ಅವರನ್ನು ಯಾರು ತಡೆದು ನಿಲ್ಲಿಸಿದ್ದಾರೆ?,'' ಎಂದು ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ಹೇಳಿದರು.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡ ನಂತರ ಮಾತನಾಡಿದ್ದ ಸೈನಿ "ಪಕ್ಷದ ಮುಸ್ಲಿಂ ಕಾರ್ಯಕರ್ತರು ಖುಷಿ ಪಡಬಹುದು, ಈಗ ಅವರು ಕಾಶ್ಮೀರದ ಬಿಳಿ ಚರ್ಮದ ಮಹಿಳೆಯರನ್ನು ವಿವಾಹವಾಗಬಹುದು,'' ಎಂದು ಹೇಳಿ ವಿವಾದಕ್ಕೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News