ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ನೀರು: ಏರ್ ಇಂಡಿಯದ 4 ವಿಮಾನಗಳು ರದ್ದು

Update: 2020-01-12 18:07 GMT

ದುಬೈ, ಜ. 12: ದುಬೈಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಅಲ್ಲಿನ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿದ ಬಳಿಕ ಅಲ್ಲಿಗೆ ಪ್ರಯಾಣಿಸಬೇಕಾಗಿದ್ದ ನಾಲ್ಕು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಏರ್ ಇಂಡಿಯ ಶನಿವಾರ ತಿಳಿಸಿದೆ.

ಎಐ905 ಚೆನ್ನೈ-ದುಬೈ ವಿಮಾನವು ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯಿತಾದರೂ ನಿಲುಗಡೆ ಸ್ಥಳವನ್ನು ತಲುಪಲು ಸುಮಾರು 5 ಗಂಟೆ ಬೇಕಾಯಿತು ಎಂದು ಏರ್ ಇಂಡಿಯ ವಕ್ತಾರ ಧನಂಜಯ್ ಕುಮಾರ್ ತಿಳಿಸಿದರು.

‘‘ಎಐ937 ಕಲ್ಲಿಕೋಟೆ-ದುಬೈ ವಿಮಾನಕ್ಕೆ ದುಬೈಯಲ್ಲಿ ಇಳಿಯಲೂ ಸಾಧ್ಯವಾಗಿಲ್ಲ. ಅದನ್ನು ಬಳಿಕ ಅಲ್-ಮಖ್ತೂಮ್ ವಿಮಾನ ನಿಲ್ದಾಣದತ್ತ ತಿರುಗಿಸಲಾಯಿತು’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

ದಿಲ್ಲಿ-ದುಬೈ-ದಿಲ್ಲಿ, ಮುಂಬೈ-ದುಬೈ-ಮುಂಬೈ ಮತ್ತು ಹೈದರಾಬಾದ್-ದುಬೈ-ಹೈದರಾಬಾದ್ ಮತ್ತು ಚೆನ್ನೈ-ದುಬೈ-ಚೆನ್ನೈ ವಿಮಾನಗಳನ್ನು ರದ್ದುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News