ನಾಣ್ಯದ ಗೊಂದಲ ನಿವಾರಿಸಿ

Update: 2020-01-13 18:34 GMT

ಮಾನ್ಯರೇ,

ಆರ್‌ಬಿಐನಿಂದ ಚಲಾವಣೆಗೆ ಬಂದಿರುವ ಹತ್ತು ರೂಪಾಯಿಯ ನಾಣ್ಯಗಳು ಮಾರುಕಟ್ಟೆಯಲ್ಲಿ ತಲೆಬಿಸಿಯಾಗಿ ಪರಿಣಮಿಸುತ್ತಿವೆ. ಈಗ ಎಲ್ಲೆಡೆ ಸಾರ್ವಜನಿಕರು ಈ ನಾಣ್ಯಗಳು ರದ್ದಾಗಿದೆಯೆಂದು ಸ್ವಯಂ ಘೋಷಿಕೊಂಡು ಯಾರೂ ಪಡೆಯುವುದಿಲ್ಲ. ಬ್ಯಾಂಕಿನಲ್ಲಿ ಹೋಗಿ ಇಂತಹ ಹತ್ತು ರೂಪಾಯಿ ನಾಣ್ಯವನ್ನು ನೀಡಿದರೆ ಅವರು ಮರು ಪ್ರಶ್ನಿಸದೆ ಇದನ್ನು ಸ್ವೀಕರಿಸುತ್ತಾರೆ. ಸರಕಾರದಿಂದಾಗಲಿ ಅಥವಾ ರಾಷ್ಟ್ರೀಕೃತ ಬ್ಯಾಂಕಿನಿಂದಾಗಲಿ ಇಂತಹ ಕಾಯಿನ್‌ಗಳು ನಿಷೇಧಿಸಲ್ಪಡದಿರುವುದರಿಂದ ಸಾರ್ವಜನಿಕರು ಯಾಕೆ ಅನಗತ್ಯ ಈ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೋ ಅರ್ಥವಾಗದ ಸಂಗತಿಯಾಗಿದೆ. ಇಂತಹ ಅನಗತ್ಯ ಗೊಂದಲವನ್ನು ನಿವಾರಿಸಲು ಸರಕಾರವು ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಬೇಕು.

-ರಿಯಾಝ್ ಅಹ್ಮದ್ ರೋಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News