ಶಾಲೆಯಲ್ಲಿ ಸಿಎಎ ಪರ ಕಾರ್ಯಕ್ರಮ: ಪತ್ರಕರ್ತನ ಪ್ರಶ್ನೆಗಳಿಗೆ 27 ಬಾರಿ ಒಂದೇ ಉತ್ತರ ನೀಡಿದ ಬಿಜೆಪಿ ನಾಯಕ!

Update: 2020-01-14 09:17 GMT
Photo: NDTV Videos 

ಮುಂಬೈ: ಇಲ್ಲಿನ ಮಾಟುಂಗ ಪ್ರದೇಶದಲ್ಲಿರುವ ದಯಾನಂದ್ ಬಾಲಕ್ ಬಾಲಿಕಾ ವಿದ್ಯಾಲಯದಲ್ಲಿ ಇತ್ತೀಚೆಗೆ ಸಿಎಎ ಬೆಂಬಲಿಸಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿಗೆ ಧನ್ಯವಾದ ತಿಳಿಸಿ ಪೋಸ್ಟ್ ಕಾರ್ಡ್ ಬರೆಯುವಂತೆ ವಿದ್ಯಾರ್ಥಿಗಳಿಗೆ ಹೇಳಲಾದ ಘಟನೆ ತೀವ್ರ ಟೀಕೆಗೆ ಗುರಿಯಾಗಿದೆ. ಈ ಘಟನೆ ಕುರಿತಂತೆ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರಿಟ್ ಸೋಮಯ್ಯ ಅವರು ಎನ್‍ ಡಿಟಿವಿ ಪ್ರತಿನಿಧಿ ಕೇಳಿದ ಹಲವಾರು ಪ್ರಶ್ನೆಗಳಿಗೆ `ಮೈನೇ ಆಪ್‍ ಕೋ  ಜವಾಬ್ ದೇ ದಿಯಾ ಹೈ' ಎಂಬ ಒಂದೇ ಉತ್ತರವನ್ನು 27 ಬಾರಿ ನೀಡಿದ ವೀಡಿಯೋ ವೈರಲ್ ಆಗಿದೆ.

ಸೋಮವಾರ ಶಾಲೆಗೆ ಭೇಟಿ ನೀಡಿದ್ದ ಬಿಜೆಪಿ ನಾಯಕನನ್ನು ಸಂಪರ್ಕಿಸಿದ ಎನ್‍ ಡಿಟಿವಿ ಪ್ರತಿನಿಧಿ, ಶಾಲಾ ಮಕ್ಕಳನ್ನು  ಯೋಜನೆಗೆ ಬೆಂಬಲ ಸೂಚಿಸುವಂತೆ ಮಾಡಿರುವುದರ ಕುರಿತಾದ ಆರೋಪಗಳಿಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಅವರ ಬಳಿ ಇದ್ದ ಉತ್ತರ ಒಂದೇ ಆಗಿತ್ತು. "ಮೈನೇ ಆಪ್ ಕೋ ಜವಾಬ್ ದೇ ದಿಯಾ ಹೈ'' ಪ್ರತಿನಿಧಿ ಕೇಳಿದ ಹಲವಾರು ಪ್ರಶ್ನೆಗಳಿಗೆ ಸೋಮಯ್ಯ 27 ಬಾರಿ ಇದೇ ಉತ್ತರ ನೀಡಿ ಎಲ್ಲರನ್ನೂ ದಂಗಾಗಿಸಿದ್ದಾರೆ.

ಅವರ ಉತ್ತರದ ಹ್ಯಾಶ್ ಟ್ಯಾಗ್  "ಮೈನೇ ಆಪ್ ಕೋ ಜವಾಬ್ ದೇ ದಿಯಾ ಹೈ''  ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಸಿಎಎ ಪರ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಂದ ಪೋಸ್ಟ್ ಕಾರ್ಡ್ ಬರೆಸಿದ ಶಾಲೆಗೆ ಮಹಾರಾಷ್ಟ್ರ ಸರಕಾರ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News