​ ಮೊದಲ ಏಕದಿನ : ಭಾರತ 255ಕ್ಕೆ ಆಲೌಟ್

Update: 2020-01-14 12:32 GMT

ಮುಂಬೈ, ಜ.14: ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ 49.1 ಓವರ್‌ಗಳಲ್ಲಿ 255ಕ್ಕೆ ಆಲೌಟಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆತಿಥೇಯ ಭಾರತ ತಂಡದ ಪರ ಶಿಖರ್ ಧವನ್(74) ಮತ್ತು ಲೋಕೇಶ್ ರಾಹುಲ್(47) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.
 ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(10), ವಿರಾಟ್ ಕೊಹ್ಲಿ(16), ರಿಷಭ್ ಪಂತ್(28), ರವೀಂದ್ರ ಜಡೇಜ(25), ಶಾರ್ದುಲ್ ಠಾಕೂರ್(13), ಮುಹಮ್ಮದ್ ಶಮಿ(10), ಕುಲದೀಪ್ ಯಾದವ್(17) ಎರಡಂಕೆಯ ಕೊಡುಗೆ ನೀಡಿದರು.
 ಶ್ರೇಯಸ್ ಅಯ್ಯರ್4ರನ್ ಗಳಿಸಿದರು.
ಆಸ್ಟ್ರೇಲಿಯ ತಂಡದ ಮಿಚೆಲ್ ಸ್ಟಾರ್ಕ್ 56ಕ್ಕೆ 3, ಪ್ಯಾಟ್ ಕಮಿನ್ಸ್ ಮತ್ತು ಕೇನ್ ರಿಚರ್ಡ್ಸನ್ ತಲಾ 2 ವಿಕೆಟ್, ಆ್ಯಡಮ್ ಝಾಂಪ ಮತ್ತು ಆ್ಯಸ್ಟನ್ ಅಗರ್ ತಲಾ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News