ಸರಕಾರಿ-ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳಿಗೆ ಸದ್ಯದಲ್ಲಿಯೇ 'ಯೋಗ ಬ್ರೇಕ್'!

Update: 2020-01-14 14:04 GMT

ಹೊಸದಿಲ್ಲಿ: ವೃತ್ತಿಪರರಿಗೆ  ಒತ್ತಡ ನಿವಾರಿಸಿಕೊಳ್ಳಲು ಹಾಗೂ ಉಲ್ಲಸಿತರಾಗಲು ಉದ್ಯೋಗ ಸ್ಥಳಗಳಲ್ಲಿ ಕೆಲಸದ ನಡುವೆ  5 ನಿಮಿಷದ 'ವೈ-ಬ್ರೇಕ್' ಅಥವಾ 'ಯೋಗ ಬ್ರೇಕ್' ಪರಿಚಯಿಸುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಸರಕಾರಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಈ ಯೋಗ ಬ್ರೇಕ್ ಇನ್ನು ಮುಂದೆ ದಿನಚರಿಯ ಭಾಗವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕೇಂದ್ರ ಆಯುಷ್ ಸಚಿವಾಲಯವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಇನ್‍ ಸ್ಟಿಟ್ಯೂಟ್ ಸಹಕಾರದೊಂದಿಗೆ ಹಾಗೂ ಖ್ಯಾತ ಯೋಗ ಪಟುಗಳ ಮಾರ್ಗದರ್ಶನದೊಂದಿಗೆ ಈ 'ವೈ ಬ್ರೇಕ್' ಪ್ರೊಟೋಕಾಲ್ ಅನ್ನು ಸೋಮವಾರ ಆರಂಭಿಸಿದೆ.

ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಕೆಮಿಕಲ್ಸ್, ಆಕ್ಸಿಸ್ ಬ್ಯಾಂಕ್ ಸಹಿತ  ಸುಮಾರು 15 ಸಂಸ್ಥೆಗಳು ಈಗಾಗಲೇ ವೈ-ಬ್ರೇಕ್ ಅಳವಡಿಸಲು ಮುಂದೆ ಬಂದಿವೆ. ಕೆಲಸದಿಂದ ಐದು ನಿಮಿಷ ಬಿಡುವು ಪಡೆದ ಲಘು ಯೋಗ ವ್ಯಾಯಾಮವನ್ನು ವೈ-ಬ್ರೇಕ್ ಸಂದರ್ಭ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News