ಬಿಪಿಎಸ್‌ಎಲ್‌ನ ಮಾಜಿ ಸಿಎಂಡಿ ಸಿಂಘಾಲ್ ರ 204 ಕೋಟಿ ರೂ. ಆಸ್ತಿ ಮುಟ್ಟುಗೋಲು

Update: 2020-01-18 16:09 GMT

ಹೊಸದಿಲ್ಲಿ,ಜ.18: ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಭೂಷಣ್ ವಿದ್ಯುತ್ ಹಾಗೂ ಉಕ್ಕು ಲಿಮಿಟೆಡ್(ಬಿಪಿಎಸ್‌ಎಲ್)ನ ಮುಖ್ಯ ಆಡಳಿತ ನಿರ್ದೇಶಕ ಸಂಜಯ್ ಸಿಂಗಾಲ್ ಅವರಿಗೆ ಸೇರಿದ 204 ಕೋಟಿ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆಯೆಂದು ಜಾರಿನಿರ್ದೇಶನಾಲಯ ಶನಿವಾರ ತಿಳಿಸಿದೆ. ಮುಟ್ಟುಗೋಲು ಹಾಕಲ್ಪಟ್ಟ ಆಸ್ತಿಗಳಲ್ಲಿ ದಿಲ್ಲಿ ಹಾಗೂ ಲಂಡನ್‌ನಲ್ಲಿರುವ ಸಿಂಗಾಲ್ ಅವರ ಮನೆಗಳೂ ಸೇರಿವೆ ಅದು ಹೇಳಿದೆ.

 ಬಿಪಿಎಸ್‌ಎಲ್‌ನ 204.31 ಕೋಟಿ ರೂ. ಮೊತ್ತದ ಬ್ಯಾಂಕ್ ಸಾಲದ ನಿಧಿಯನ್ನು ಸಂಜಯ್‌ ಸಿಂಘಾಲ್ ಅವರು ಭಾರತ ಹಾಗೂ ವಿದೇಶಗಳಲ್ಲಿ ಆಸ್ತಿಗಳನ್ನು ಖರೀದಿಸಲು ಬಳಸಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ.

ಕಪ್ಪುಹಣ ಬಿಳುಪು ತಡೆ ಕಾಯ್ದೆ ಕುರಿತ ವಿಶೇಷ ನ್ಯಾಯಾಲಯಲ್ಲಿ ಸಿಂಘಾಲ್ ಸೇರಿದಂತೆ 24 ಮಂದಿಯ ವಿರುದ್ಧ ಜಾರಿ ನಿರ್ದೇಶನಾಲಯ ಶುಕ್ರವಾರ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಜನವರಿ 21ರಂದು ಸಿಂಘಾಲ್ ಅವರನ್ನು ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ವಾರಂಟ್ ಹೊರಡಿಸಿದೆ.

ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಸಿಂಘಾಲ್ ಅವರನ್ನು ಕಳೆದ ವರ್ಷ ದ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News