ಪಾಕ್ ಕ್ರಿಕೆಟ್ ಪ್ರವಾಸದಿಂದ ಹಿಂದೆ ಸರಿದ ಬಾಂಗ್ಲಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್

Update: 2020-01-18 17:03 GMT

ಢಾಕಾ, ಜ.18: ಮುಂಬರುವ ಪಾಕಿಸ್ತಾನ ಪ್ರವಾಸದಿಂದ ಬಾಂಗ್ಲಾದೇಶದ ಬ್ಯಾಟಿಂಗ್ ಕೋಚ್ ನೀಲ್ ಮೆಕಂಝಿ ಹಾಗೂ ಫೀಲ್ಡಿಂಗ್ ಕೋಚ್ ರಿಯಾನ್ ಕುಕ್ ಹಿಂದೆ ಸರಿದಿದ್ದಾರೆ.

ಬಾಂಗ್ಲಾದೇಶ ತಂಡ ಐವರು ಕೋಚಿಂಗ್ ಸಿಬ್ಬಂದಿ ಇಲ್ಲದೆ ಪಾಕ್‌ಗೆ ತೆರಳಲಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಕ್ರಮ್ ಖಾನ್ ಹೇಳಿದ್ದಾರೆ.

 ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರಾದ ಮೆಕೆಂಝಿ ಹಾಗೂ ಕುಕ್ ಸ್ವತಃ ಪಾಕ್ ಪ್ರವಾಸದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇಂತಹ ಕಿರುಸರಣಿಗೆ ಸ್ಪಿನ್ ಸಲಹೆಗಾರ ಡೇನಿಯಲ್ ವಿಟೋರಿಯನ್ನು ಕರೆದೊಯ್ಯದಿರಲು ಬಿಸಿಬಿ ನಿರ್ಧರಿಸಿದೆ ಎಂದು ಅಕ್ರಮ್ ಖಾನ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಶ್ಫಿಕುರ್ರಹೀಂ ಕೂಡ ಪಾಕ್ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದರು. ಬಾಂಗ್ಲಾದೇಶ ತಂಡ ಪಾಕ್‌ನಲ್ಲಿ 3 ಟ್ವೆಂಟಿ-20 ಪಂದ್ಯ, 2 ಟೆಸ್ಟ್ ಹಾಗೂ ಏಕೈಕ ಏಕದಿನ ಪಂದ್ಯಗಳನ್ನು ಆಡಲಿದೆ. ಜನವರಿ ಹಾಗೂ ಎಪ್ರಿಲ್ ನಡುವೆ ಈ ಸರಣಿಯಲ್ಲಿ ಆಡಲಿದೆ. ಟಿ-20 ಸರಣಿಯು ಜ.24ರಿಂದ 27ರ ತನಕ ನಡೆಯಲಿದೆ. ಆ ಬಳಿಕ ಮೊದಲ ಟೆಸ್ಟ್ ಫೆ.7ರಿಂದ 11ರ ತನಕ ರಾವಲ್ಪಿಂಡಿಯಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News