29ನೆ ಶತಕ ದಾಖಲಿಸಿದ ರೋಹಿತ್ ಶರ್ಮಾ

Update: 2020-01-19 15:02 GMT

ಬೆಂಗಳೂರು, ಜ. 19: ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 29ನೇ ಶತಕ ದಾಖಲಿಸಿದರು.

  ಆಸ್ಟ್ರೇಲಿಯ ವಿರುದ್ದ ಅಂತಿಮ ಪಂದ್ಯದಲ್ಲಿ 32ರ ಹರೆಯದ ರೋಹಿತ್ 110 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಶತಕ ಪೂರೈಸಿದರು. ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಿದ ಲೋಕೇಶ್ ರಾಹುಲ್ ಬೇಗನೆ ಔಟಾದರು. ಆದರೆ ರೋಹಿತ್ ಮತ್ತು ನಾಯಕ ವಿರಾಟ್ ಕೊಹ್ಲಿ ಚೆನ್ನಾಗಿ ಆಡಿದರು. 36 ಓವರ್‌ಗಳ ಮುಕ್ತಾಯಕ್ಕೆ ಭಾರತ 36 ಓವರ್ ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 205 ರನ್ ಗಳಿಸಿತ್ತು. ರೋಹಿತ್ ಶರ್ಮಾ ಔಟಾಗದೆ 119ರನ್ ಮತ್ತು ಕೊಹ್ಲಿ 59 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News