ಶತಕದ ಬರ ನೀಗಿಸಿಕೊಂಡ ಸ್ಟೀವನ್ ಸ್ಮಿತ್

Update: 2020-01-20 04:11 GMT

ಬೆಂಗಳೂರು, ಜ.19: ಭಾರತ ವಿರುದ್ಧ ರವಿವಾರ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಶತಕದ ಬರ ನೀಗಿಸಿಕೊಂಡರು.

ಸರಿಯಾಗಿ ಎರಡು ವರ್ಷಗಳ ಬಳಿಕ ಸ್ಮಿತ್ ಮೂರಂಕೆ ದಾಟಿದರು.ಇದಕ್ಕೆ ಅವರು 27 ಇನಿಂಗ್ಸ್ ಗಳಲ್ಲಿ ಆಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ವಿರುದ್ಧ ಪರ್ತ್‌ನಲ್ಲಿ ಶತಕ ಸಿಡಿಸಿದ್ದು, ಆ ಪಂದ್ಯವನ್ನು ಆಸ್ಟ್ರೇಲಿಯ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಸ್ಮಿತ್ ಏಕದಿನ ಕ್ರಿಕೆಟ್‌ನಲ್ಲಿ 9ನೇ ಹಾಗೂ ಭಾರತ ವಿರುದ್ದ 3ನೇ ಶತಕ ಸಿಡಿಸಿದರು. 44ನೇ ಓವರ್‌ನಲ್ಲಿ ನವದೀಪ ಸೈನಿ ಎಸೆತದಲ್ಲಿ ಒಂದು ರನ್ ಗಳಿಸುವುದರೊಂದಿಗೆ ಸ್ಮಿತ್ ಶತಕ ಪೂರೈಸಿದರು. 48ನೇ ಓವರ್‌ನಲ್ಲಿ 132 ಎಸೆತಗಳಲ್ಲಿ 131 ರನ್ ಗಳಿಸಿ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಇನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಇತ್ತು. ಬೆಂಗಳೂರಿನಲ್ಲಿ ಗರಿಷ್ಠ ಏಕದಿನ ಸ್ಕೋರ್ ಗಳಿಸಿದ ಆಸೀಸ್ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಸ್ಮಿತ್ ಪಾತ್ರರಾದರು. ಸ್ಮಿತ್ 93 ರನ್ ಗಳಿಸಿದ ತಕ್ಷಣ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 4,000 ರನ್ ಪೂರೈಸಿದ ಆಸೀಸ್‌ನ 4ನೇ ಹಾಗೂ ವಿಶ್ವದ 16ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News