ನಾಡಕರ್ಣಿ ಗೌರವಾರ್ಥ ಕಪ್ಪುಪಟ್ಟಿ ಧರಿಸಿದ ಭಾರತದ ಕ್ರಿಕೆಟಿಗರು

Update: 2020-01-20 04:17 GMT

ಬೆಂಗಳೂರು, ಜ.19: ಇತ್ತೀಚೆಗೆ ನಿಧನರಾದ ಮಾಜಿ ಆಲ್‌ರೌಂಡರ್ ಬಾಪು ನಾಡಕರ್ಣಿ ಗೌರವಾರ್ಥ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಆಸ್ಟ್ರೇಲಿಯ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡಿದರು. 86ರ ವಯಸ್ಸಿನ ನಾಡಕರ್ಣಿ ಶುಕ್ರವಾರ ರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದರು. ಎಡಗೈ ಬ್ಯಾಟ್ಸ್‌ಮನ್ ಹಾಗೂ ಎಡಗೈ ಸ್ಪಿನ್ನರ್ ಆಗಿದ್ದ ನಾಡಕರ್ಣಿ 41 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 1,414 ರನ್ ಹಾಗೂ 88 ವಿಕೆಟ್‌ಗಳನ್ನು ಕಬಳಿಸಿದ್ದರು. ಮುಂಬೈ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದ ನಾಡಕರ್ಣಿ 191 ಪ್ರಥಮ ದರ್ಜೆ ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಪಡೆದಿದ್ದಲ್ಲದೆ, 8,880 ರನ್ ಗಳಿಸಿದ್ದರು. ಮದ್ರಾಸ್‌ನಲ್ಲಿ(ಈಗಿನ ಚೆನ್ನೈ) ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ 21 ಮೇಡನ್ ಓವರ್‌ಗಳನ್ನು ಎಸೆದು ಖ್ಯಾತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News