ಬಾಗ್ದಾದ್: ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ ಮೂರು ರಾಕೆಟ್‌ಗಳು

Update: 2020-01-21 04:00 GMT
ಸಾಂದರ್ಭಿಕ ಚಿತ್ರ

ಬಾಗ್ದಾದ್, ಜ.21: ಇರಾಕ್ ರಾಜಧಾನಿಯ ಗರಿಷ್ಠ ಭದ್ರತೆಯ ಹಸಿರು ವಲಯದಲ್ಲಿ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮತ್ತೆ ಮೂರು ರಾಕೆಟ್‌ಗಳು ಅಪ್ಪಳಿಸಿವೆ. ತಕ್ಷಣಕ್ಕೆ ಯಾವುದೇ ಸಾವು ನೋವಿನ ವಿವರಗಳು ತಿಳಿದುಬಂದಿಲ್ಲ.
ರಾಕೆಟ್‌ಗಳು ಅಪ್ಪಳಿಸಿದ ತಕ್ಷಣ ಇಡೀ ಪ್ರದೇಶದಿಂದ ಸೈರನ್‌ಗಳು ಮೊಳಗುವುದು ಕೇಳಿಬಂತು.
ಇತ್ತೀಚಿನ ದಿನಗಳಲ್ಲಿ ಹಸಿರು ವಲಯದ ಮೇಲೆ ನಡೆಯುತ್ತಿರುವ ಇಂಥ ದಾಳಿಗಳಿಗೆ ಇರಾನ್ ಬೆಂಬಲದ ಅರೆಮಿಲಿಟರಿ ಪಡೆಗಳು ಕಾರಣ ಎಂದು ಅಮೆರಿಕ ಆಪಾದಿಸಿದೆ. ಆದರೆ ಯಾವುದೇ ಸಂಘಟನೆಗಳು ಈ ದಾಳಿಯ ಹೊಣೆಯನ್ನು ಹೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News