ಟಿಕೆಟ್ ರಹಿತ ಪ್ರಯಾಣ: ವಸೂಲಿ ಮಾಡಿದ ದಂಡ ಎಷ್ಟು ಲಕ್ಷ ರೂ. ಗೊತ್ತೇ ?

Update: 2020-01-21 12:54 GMT

ಬೆಂಗಳೂರು, ಜ. 21: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಂದ ಒಟ್ಟು 10 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ.

ಡಿಸೆಂಬರ್ ತಿಂಗಳಲ್ಲಿ 18,929 ಟ್ರಿಪ್‌ಗಳನ್ನು ತಪಾಸಣೆ ನಡೆಸಿ 5,497 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ, ಅವರಿಂದ ಒಟ್ಟು 10,06,960 ರೂ.ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, ಸಂಸ್ಧೆಯ ನಿರ್ವಾಹಕರ ವಿರುದ್ಧ 2,748 ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಲ್ಲದೆ, ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 266 ಪುರುಷ ಪ್ರಯಾಣಿಕರಿಂದ ಒಟ್ಟು 26,600 ರೂ.ದಂಡವನ್ನು ವಸೂಲಿ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರು ನಿಗದಿತ ಟಿಕೆಟ್ ಪಡೆದು ಸಂಸ್ಥೆ ವಾಹನಗಳಲ್ಲಿ ಸಂಚರಿಸಬೇಕು ಎಂದು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News