ನಿಮ್ಮ ತಲೆಯ ಮೇಲೆ ಕೂದಲು ಇರುವುದಕ್ಕಿಂತ ಹೆಚ್ಚು ಹಣ ನನ್ನಲ್ಲಿದೆ: ಸೆಹ್ವಾಗ್ ಗೆ ಅಖ್ತರ್ ತಿರುಗೇಟು

Update: 2020-01-23 09:22 GMT

ಕರಾಚಿ, ಜ.23: ನಿಮ್ಮ ತಲೆಯ ಮೇಲೆ ಕೂದಲು ಇರುವುದಕ್ಕಿಂತ ಹೆಚ್ಚು ಹಣ ನನ್ನ ಬಳಿ ಇದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶುಐಬ್ ಅಖ್ತರ್ ತಿರುಗೇಟು ನೀಡಿದ್ದಾರೆ.

ಶುಐಬ್ ಅಖ್ತರ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಇತ್ತೀಚಿನ ವೀಡಿಯೊದಲ್ಲಿ 2016 ರ ಹಿಂದಿನ ವೀರೇಂದ್ರ ಸೆಹ್ವಾಗ್ ಅವರ ಕಾಮೆಂಟ್‌ಗಳಿಗೆ ಉತ್ತರಿಸಿದ್ದಾರೆ.  ಶುಐಬ್ ಅಖ್ತರ್ ಅವರು ಭಾರತದಲ್ಲಿ ವ್ಯವಹಾರದ ಅಗತ್ಯವಿರುವುದರಿಂದ ಭಾರತೀಯ ಕ್ರಿಕೆಟ್ ಮತ್ತು ಅದರ ಕ್ರಿಕೆಟಿಗರನ್ನು ತುಂಬಾ ಹೊಗಳುತ್ತಾರೆ  ಎಂದು ಸೆಹ್ವಾಗ್ ಹೇಳಿದ್ದರು.

"ನಿಮ್ಮ ತಲೆಯ ಮೇಲೆ ಬಾಲ್ (ಕೂದಲು) ಇರುವುದಕ್ಕಿಂತ ನನ್ನ ಬಳಿ ಹೆಚ್ಚು ಮಾಲ್ (ಹಣ) ಇದೆ. ನಾನು ಅಂತಹ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ವಿಚಾರ ನಿಮಗೆ ತಿಳಿಯಲು ಸಾಧ್ಯವಾಗದಿದ್ದರೆ ಇದನ್ನು ಅರ್ಥಮಾಡಿಕೊಳ್ಳಿ., ಭಾರತದಲ್ಲಿ ನನಗೆ ಅಪಾರ ಅಭಿಮಾನಿಗಳಿದ್ದಾರೆ, ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಉತ್ತಮವಾಗಿ ಆಡದಿದ್ದಾಗ ನಾನು ಅವರನ್ನು ಟೀಕಿಸಿದ್ದೇನೆ” ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಮುಂಬೈನಲ್ಲಿ ನಡೆದ  ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಸೋತ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಬಳಿಕ ಚೇತರಿಸಿಕೊಂಡು ತಿರುಗೇಟು ನೀಡಿರುವುದನ್ನು ಶುಐಬ್ ಅಖ್ತರ್ ತನ್ನ ಯುಟ್ಯೂಬ್ ಚಾನೆಲ್ 'ಶೋಯಿಬ್ 100 ಎಂಪಿಎಚ್' ನಲ್ಲಿ  ಶ್ಲಾಘಿಸಿ ಕೊಹ್ಲಿಯನ್ನು "ಅಸಾಧಾರಣ ನಾಯಕ" ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News