ಯುವಕರ ಪ್ರತಿಭಟನೆಯಿಂದ ಪ್ರಜಾಪ್ರಭುತ್ವದ ಬೇರು ಮತ್ತಷ್ಟು ಗಟ್ಟಿ: ಪ್ರಣಬ್ ಮುಖರ್ಜಿ

Update: 2020-01-24 03:57 GMT

ಹೊಸದಿಲ್ಲಿ: ಬಹುತೇಕ ಶಾಂತಿಯುತ ಪ್ರತಿಭಟನೆಗಳು ದೇಶದಲ್ಲಿ ನಡೆಯುತ್ತಿದ್ದು, ಇದು ಭಾರತದ ಪ್ರಜಾಪ್ರಭುತ್ವ ಆಳವಾಗಿ ಬೇರೂರಲು ಕಾರಣವಾಗಲಿದೆ. ಯುವಕರ ಪ್ರತಿಪಾದನೆ ಮತ್ತು ಸಂವಿಧಾನದ ಬಗೆಗಿನ ನಂಬಿಕೆ ನಿಜಕ್ಕೂ ಹೃದಯಸ್ಪರ್ಶಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅವರಿಗೆ ಮಹತ್ವದ್ದು ಎನಿಸಿದ ವಿಚಾರಗಳ ಬಗ್ಗೆ ತಮ್ಮ ಧ್ವನಿ ಎತ್ತಲು ಕಳೆದ ಕೆಲ ತಿಂಗಳಲ್ಲಿ ಜನ, ಅದರಲ್ಲೂ ಮುಖ್ಯವಾಗಿ ಯುವಕರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ ಎಂದು ಚುನಾವಣಾ ಆಯೋಗ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಅವರು ವಿವರಿಸಿದರು.

ಕೇಳುವಿಕೆ, ವಿಷಯ ಮಂಥನ, ಚರ್ಚೆ, ವಾದ ಮತ್ತು ಭಿನ್ನಾಭಿಪ್ರಾಯದ ಮೂಲಕ ಪ್ರಜಾಪ್ರಭುತ್ವ ಬೆಳೆಯುತ್ತದೆ. ದೇಶದಲ್ಲಿ ನಡೆಯುತ್ತಿರುವ ಬಹುತೇಕ ಶಾಂತಿಯುತವಾಗಿರುವ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಆಳಕ್ಕೆ ಹೋಗಲು ನೆರವಾಗುತ್ತದೆ ಎನ್ನುವುದು ನನ್ನ ನಂಬಿಕೆ ಎಂದರು.

ಎನ್‌ಆರ್‌ಸಿ- ಎನ್‌ಪಿಆರ್ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಖರ್ಜಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಚುನಾವಣಾ ಆಯೋಗ ಆಯೋಜಿಸಿದ್ದ ಸುಕುಮಾರ್ ಸೇನ್ ಉಪನ್ಯಾಸದಲ್ಲಿ, "ಚುನಾವಣಾ ಆಯೋಗ ತನ್ನ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದೆ. ಅದನ್ನು ನಿರಾಕರಿಸುವ ಯಾವುದೇ ಪ್ರಯತ್ನಗಳು ಚುನಾವಣಾ ವ್ಯವಸ್ಥೆಯನ್ನೇ ನಿರಾಕರಿಸಿದಂತೆ" ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News