ಪ್ರತಿಭಟಿಸುವ ಕೆಲಸ ರಾಜಕಾರಣಿಗಳಿಗೆ ಬಿಟ್ಟು ಬಿಡಿ: ವಿದ್ಯಾರ್ಥಿಗಳಿಗೆ ರಾಮದೇವ್ ಸಲಹೆ

Update: 2020-01-24 13:22 GMT

ಹೊಸದಿಲ್ಲಿ: ದೇಶಾದ್ಯಂತದ ವಿವಿಧ  ವಿಶ್ವವಿದ್ಯಾಲಯಗಳ ಹಾಗೂ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು  ಪ್ರತಿಭಟನೆಯ ಕೆಲಸವನ್ನು ರಾಜಕಾರಣಿಗಳಿಗೆ ಬಿಟ್ಟು ಬಿಡಬೇಕು ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

"ಈ ದಿನಗಳಲ್ಲಿ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಲ್ಲಿ ಪ್ರತಿಭಟನೆಗಳು ಹಾಗೂ ಹಿಂಸೆಯೇ ನಡೆಯುತ್ತಿದೆ. ವಿದ್ಯಾರ್ಥಿಗಳು ಪ್ರತಿಭಟನೆಯ ಕೆಲಸವನ್ನು ರಾಜಕಾರಣಿಗಳಿಗೆ ಬಿಟ್ಟು ಬಿಡದೇ ಇದ್ದರೆ ರಾಜಕಾರಣಿಗಳು ನಿರುದ್ಯೋಗಿಗಳಾಗಿ ಬಿಡುತ್ತಾರೆ. ಅರಾಜಕತೆ ಹರಡುವುದು ಹಾಗೂ ಸಾರ್ವಜನಿಕ ಪ್ರತಿಭಟನೆಗಳಲ್ಲಿ ತೊಡಗಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲ,'' ಎಂದು ಸುದ್ದಿಗೋಷ್ಠಿಯಲ್ಲಿ  ಅವರು ಹೇಳಿದರು.

"ವಿದ್ಯಾರ್ಥಿಗಳು ತಮ್ಮ ಭವಿಷ್ಯದತ್ತ ಗಮನ ನೀಡಬೇಕು ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಯಾವಾಗಲೂ ಆಝಾದಿ ಘೋಷಣೆಗಳನ್ನು ಮುಖ್ಯವಾಗಿ 'ಜಿನ್ನಾ ರೀತಿಯ ಆಝಾಧಿ ಘೋಷಣೆಗಳನ್ನು' ಕೂಗುವುದು ದೇಶದ್ರೋಹವೆಸಗಿದಂತೆ,'' ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News