ಚೀನಾದ ಮಹಾಗೋಡೆ ವೀಕ್ಷಣೆ ನಿಷೇಧ

Update: 2020-01-24 14:27 GMT

ಬೀಜಿಂಗ್, ಜ. 24: ನೂರಾರು ಜನರಲ್ಲಿ ಸೋಂಕು ಹರಡಿರುವ ಮಾರಕ ಕೊರೋನವೈರಸ್‌ನ ಹರಡುವಿಕೆಯನ್ನು ತಡೆಯಲು ಮಹಾಗೋಡೆಯ ಒಂದು ಭಾಗ ಹಾಗೂ ರಾಜಧಾನಿ ಬೀಜಿಂಗ್‌ನ ಇತರ ಹಲವಾರು ಪ್ರಮುಖ ಸ್ಥಳಗಳನ್ನು ಮುಚ್ಚುವುದಾಗಿ ಚೀನಾ ಶುಕ್ರವಾರ ಘೋಷಿಸಿದೆ.

ವೈರಸ್ ಪ್ರಸಾರವನ್ನು ನಿಯಂತ್ರಿಸುವುದಕ್ಕಾಗಿ ಚಾಂದ್ರಮಾನ ಹೊಸ ವರ್ಷಚಾರಣೆಯ ಹಲವು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಅದೇ ವೇಳೆ, ಬೀಜಿಂಗ್‌ನ ಫಾರ್ಬಿಡನ್ ಸಿಟಿ ಮತ್ತು ಶಾಂಘೈನ ಡಿಸ್ನಿಲ್ಯಾಂಡ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಮಿಂಗ್ ಗೋರಿಗಳು ಮತ್ತು ಯಿನ್‌ಶನ್ ಪಗೋಡಗಳನ್ನು ಶನಿವಾರದಿಂದ ಮುಚ್ಚಲಾಗುವುದು ಎಂದು ಅವುಗಳ ಉಸ್ತುವಾರಿ ಹೊತ್ತಿರುವ ಪ್ರಾಧಿಕಾರ ತಿಳಿಸಿದೆ. ಅದೂ ಅಲ್ಲದೆ, 2008ರ ಒಲಿಂಪಿಕ್ ಗೇಮ್ಸ್ ನಡೆದ ‘ಬರ್ಡ್ಸ್ ನೆಸ್ಟ್’ ಸ್ಟೇಡಿಯಂನ್ನು ಶುಕ್ರವಾರದಿಂದ ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News