ಗಣರಾಜ್ಯೋತ್ಸವ ಹಿನ್ನೆಲೆ: ರಾಜ್‌ಪಥ್‌ನಲ್ಲಿ ಸೇನೆಯ ಶಕ್ತಿಯ ಪ್ರದರ್ಶನ

Update: 2020-01-26 05:52 GMT

ಹೊಸದಿಲ್ಲಿ, ಜ.26: ರಾಷ್ಟ್ರರಾಜಧಾನಿ ದಿಲ್ಲಿಯ ರಾಜ್‌ಪಥ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಧ್ವಜಾರೋಹಣ ಮಾಡಿದ್ದಾರೆ. ದೇಶಕ್ಕಾಗಿ ಹೋರಾಡಿ ಮಡಿದ ಯೋಧರಿಗೆ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರೊಂದಿಗೆ ಗಣರಾಜ್ಯೊತ್ಸವ ಪರೇಡ್ ಕಾರ್ಯಕ್ರಮ ಆರಂಭವಾಯಿತು.ಇದೇ ಮೊದಲ ಬಾರಿ ಪ್ರಧಾನಮಂತ್ರಿ ಅವರು ಅಮರ್ ಜವಾನ್ ಜ್ಯೋತಿ ಬದಲಿಗೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

71ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್‌ಪಥ್‌ನಿಂದ ಇಂಡಿಯಾ ಗೇಟ್ ತನಕ ಸೇನಾ ಪರೇಡ್ ನಡೆಯಿತು. ಈ ಮೂಲಕ ಸೇನೆಯ ಶಕ್ತಿ ಅನಾವರಣಗೊಂಡಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 10ರಿಂದ ಪಥ ಸಂಚಲನ ಆರಂಭವಾಯಿತು. ಈ ಬಾರಿಯ ಪಥ ಸಂಚಲನದಲ್ಲಿ ಒಟ್ಟು 22 ಸ್ತಬ್ದಚಿತ್ರಗಳು ಹಾಗೂ ಕೇಂದ್ರ ಸರಕಾರದ ವಿವಿಧ ಸ್ತಬ್ದಚಿತ್ರಗಳು ಮನಸೂರೆಗೊಂಡವು. ರಾಷ್ಟ್ರದ ಸೇನೆಯ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಸಾಮಾಜಿಕ ಆರ್ಥಿಕ ಪ್ರಗತಿಯನ್ನು ಗಮನದಲ್ಲಿರಿಸಿ ಸ್ತಬ್ದ ಚಿತ್ರಗಳು ಅನಾವರಣಗೊಂಡವು.

ಭಾರತೀಯ ಸೇನೆಯ ಕ್ಷಿಪಣಿಗಳು, ಕ್ಷಿಪಣಿ ವಾಹನಗಳು, ವೀರ ಯೋಧರ ಸಾಹಸ ಪ್ರದರ್ಶನ ನಡೆಯಿತು. ಭಾರತೀಯ ಸೇನೆಗೆ ಇತ್ತೀಚೆಗೆ ಸೇರ್ಪಡೆಯಾದ ಚಿನೊಕ್ ಹಾಗೂ ಅಪಾಚೆ ಹೆಲಿಕಾಪ್ಟರ್ ಆಗಸದಲ್ಲಿ ಕಸರತ್ತ ನಡೆಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News