ದ.ಆಫ್ರಿಕಾಕ್ಕೆ 466 ರನ್ ಗುರಿ

Update: 2020-01-27 04:17 GMT

ಜೋಹಾನ್ಸ್‌ಬರ್ಗ್, ಜ.26: ನಾಯಕ ಜೋ ರೂಟ್ ಅರ್ಧಶತಕದ ಕೊಡುಗೆ(58)ನೆರವಿನಿಂದ ಇಂಗ್ಲೆಂಡ್ ತಂಡ ದ.ಆಫ್ರಿಕಾ ತಂಡಕ್ಕೆ ನಾಲ್ಕನೇ ಟೆಸ್ಟ್ ಪಂದ್ಯದ ಗೆಲುವಿಗೆ 466 ರನ್ ಕಠಿಣ ಗುರಿ ನೀಡಿದೆ.

3ನೇ ದಿನವಾದ ರವಿವಾರ ಇಂಗ್ಲೆಂಡ್ 2ನೇ ಇನಿಂಗ್ಸ್ ನಲ್ಲಿ 248 ರನ್‌ಗೆ ಆಲೌಟಾಗಿರುವ ದ.ಆಫ್ರಿಕಾದ ಗೆಲುವಿಗೆ ಕಠಿಣ ಗುರಿ ನೀಡಿತು. ಸಿಬ್ಲೆ 44, ಸ್ಯಾಮ್ ಕರನ್ 35 ಹಾಗೂ ಬೆನ್ ಸ್ಟೋಕ್ಸ್ 28 ರನ್ ಗಳಿಸಿದರು. ಹೆಂಡ್ರಿಕ್ಸ್ 54 ರನ್‌ಗೆ 5 ವಿಕೆಟ್ ಪಡೆದರು. ದ.ಆಫ್ರಿಕಾ ಅಸಾಮಾನ್ಯ ಗುರಿ ಬೆನ್ನಟ್ಟಿದರೆ ಸರಣಿಯನ್ನು 2-2ರಿಂದ ಸಮಬಲಗೊಳಿಸಬಹುದು.

ರವಿವಾರ ಒಟ್ಟು 14 ವಿಕೆಟ್‌ಗಳು ಪತನಗೊಂಡವು. ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಮೊತ್ತ 400ಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 88 ರನ್‌ನಿಂದ ಇನಿಂಗ್ಸ್ ಮುಂದುವರಿಸಿತು. ಆದರೆ, ಲಂಚ್ ವಿರಾಮಕ್ಕೆ ಮೊದಲೇ ಮೊದಲ ಇನಿಂಗ್ ್ಸನಲ್ಲಿ 183 ರನ್ ಗಳಿಸಿ ಆಲೌಟಾಯಿತು. ಇಂಗ್ಲೆಂಡ್ 217 ರನ್ ಇನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಯಿತು. ಮಾರ್ಕ್ ವುಡ್ 46 ರನ್ ನೀಡಿ 5 ವಿಕೆಟ್‌ಗಳನ್ನು ಉರುಳಿಸಿದರು. ವೋಕ್ಸ್(2-38) ಹಾಗೂ ಸ್ಟೋಕ್ಸ್(2-47)ತಲಾ ಎರಡು ವಿಕೆಟ್ ಪಡೆದರು.

ಆತಿಥೇಯ ಆಫ್ರಿಕಾದ ಪರವಾಗಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಸರ್ವಾಧಿಕ ಸ್ಕೋರ್(76, 116 ಎಸೆತ,11 ಬೌಂಡರಿ)ಗಳಿಸಿದರು. ಪ್ರಿಟೋರಿಯಸ್(37, 73 ಎಸೆತ, 7 ಬೌಂಡರಿ)ಹಾಗೂ ಎಲ್ಗರ್(26,64 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News