ಕೊರೋನ ವೈರಸ್ : ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿಕೆ

Update: 2020-01-28 03:36 GMT

ವೂಹಾನ್ (ಚೀನಾ): ಚೀನಾದಲ್ಲಿ ಕೊರೋನ ವೈರಸ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 106ಕ್ಕೇರಿದ್ದು, 1300 ಹೊಸ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ವೈರಸ್ ಸೋಂಕಿನ ಕೇಂದ್ರ ಬಿಂದು ಎನಿಸಿದ ಕೇಂದ್ರ ಹ್ಯುಬೀ ಪ್ರಾಂತ್ಯದ ಆರೋಗ್ಯ ಆಯೋಗದ ಪ್ರಕಾರ, ವೈರಸ್ ಸೋಂಕಿನಿಂದ ಮತ್ತೆ 24 ಮಂದಿ ಮೃತಪಟ್ಟಿದ್ದಾರೆ. 1291 ಹೊಸ ಪ್ರಕರಣಗಳು ದೃಢಪಟ್ಟಿದ್ದು, ದೇಶಾದ್ಯಂತ 4000ಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ವೈರಸ್ ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದು, ಇತರ 12 ನಗರಗಳಿಗೂ ವ್ಯಾಪಿಸಿದೆ. ಈ ವೈರಸ್ ಇದೀಗ ಅಮೆರಿಕ, ಜಪಾನ್, ಕೊರಿಯಾ, ಥೈವಾನ್ ಮತ್ತು ನೇಪಾಳ ದೇಶಗಳಿಗೂ ಹಬ್ಬಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News