ಇಂಡಿಗೋ ನಂತರ ಕುನಾಲ್ ಕಾಮ್ರಾಗೆ ನಿಷೇಧ ಹೇರಿದ ಸ್ಪೈಸ್ ಜೆಟ್, ಏರ್ ಇಂಡಿಯಾ

Update: 2020-01-29 07:47 GMT

ಹೊಸದಿಲ್ಲಿ: ಮುಂಬೈ-ಲಕ್ನೋ ನಡುವಿನ ಇಂಡಿಗೋ ವಿಮಾನದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಪ್ರಶ್ನೆಗಳನ್ನು ಕೇಳಿದ ವಿಡಿಯೋ ವೈರಲ್ ಆದ ಮೇಲೆ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಮೇಲೆ ಇಂಡಿಗೋ 6 ತಿಂಗಳುಗಳ ನಿಷೇಧ ಹೇರಿದೆ. ಇದೀಗ  ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ಕೂಡ ಕುನಾಲ್ ಅವರಿಗೆ ಮುಂದಿನ ಸೂಚನೆ ತನಕ ತಮ್ಮ ವಿಮಾನಗಳಲ್ಲಿ ಹಾರಾಟಕ್ಕೆ ನಿಷೇಧ ಹೇರಿವೆ. ಈ ಕುರಿತಾಗಿ ಎರಡೂ ವಿಮಾನಯಾನ ಸಂಸ್ಥೆಗಳು ಇಂದು ಟ್ವೀಟ್ ಮಾಡಿವೆ.

ಸ್ಪೈಸ್ ಜೆಟ್ ತನ್ನ ಟ್ವೀಟ್‍ ನಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯ,  ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಇಂಡಿಗೋ ಏರ್ ಲೈನ್ಸ್ ಹಾಗೂ ಡಿಜಿಸಿಎಯನ್ನು ಟ್ಯಾಗ್ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಮ್ರಾ, ``ಮೋದೀ ಜಿ ನಾನು ನಡೆದಾಡಬಹುದೇ ಇಲ್ಲವೇ ಅದಕ್ಕೂ ನಿಷೇಧವಿದೆಯೇ?'' ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುಂಚೆ ಇಂಡಿಗೋ ಏರ್‍ ಲೈನ್ಸ್  ಕುನಾಲ್ ಕಾಮ್ರಾಗೆ ನಿಷೇಧ ಹೇರಿ ಟ್ವೀಟ್ ಮಾಡಿದ ಬೆನ್ನಿಗೇ ಅದನ್ನು ಮರು ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಹರ್ದೀಪ್  ಸಿಂಗ್ ಪುರಿ, ಇತರ ವಿಮಾನಯಾನ ಸಂಸ್ಥೆಗಳೂ ಇದೇ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು  ಹೇಳಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಏರ್ ಇಂಡಿಯಾ ಟ್ವೀಟ್ ಮಾಡಿ ಕಾಮ್ರಾ ಮೇಲೆ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News