ಕೊರೋನವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಅಮೆರಿಕ

Update: 2020-01-29 15:16 GMT

ವಾಶಿಂಗ್ಟನ್, ಜ. 29: ಮಾರಕ ಕೊರೋನವೈರಸ್ ಕಾಯಿಲೆಗೆ ತಾನು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದೇನೆ ಎಂದು ಅಮೆರಿಕ ಮಂಗಳವಾರ ಹೇಳಿದೆ ಹಾಗೂ ಅಂತರ್‌ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಗಳೊಂದಿಗಿನ ಸಹಕಾರವನ್ನು ಹೆಚ್ಚಿಸುವಂತೆ ಅದು ಚೀನಾವನ್ನು ಒತ್ತಾಯಿಸಿದೆ.

ರೋಗದ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ತನ್ನದೇ ಆದ ತಂಡಗಳನ್ನು ರೋಗಪೀಡಿತ ಸ್ಥಳಕ್ಕೆ ಕಳುಹಿಸಲು ಅಮೆರಿಕ ಸರಕಾರ ಉತ್ಸುಕವಾಗಿದೆ.

 ‘‘ನಮ್ಮ ಹಲವಾರು ಸಹಯೋಗಿ ಸಂಸ್ಥೆಗಳ ನೆರವಿನಿಂದ ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸವನ್ನು ನಾವು ಎನ್‌ಐಎಚ್‌ನಲ್ಲಿ ಈಗಾಗಲೇ ಆರಂಭಿಸಿದ್ದೇವೆ’’ ಎಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್)ನ ಅಧಿಕಾರಿ ಆ್ಯಂಟನಿ ಫಾಸಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News