ಜಪಾನ್: ಮೂವರಲ್ಲಿ ಸೋಂಕು ಪತ್ತೆ

Update: 2020-01-30 14:56 GMT

ಟೋಕಿಯೊ (ಜಪಾನ್), ಜ. 30: ಕೊರೋನವೈರಸ್ ಸೋಂಕಿನ ಕೇಂದ್ರಬಿಂದು ಚೀನಾದ ವುಹಾನ್ ನಗರದಿಂದ ತೆರವುಗೊಳಿಸಲ್ಪಟ್ಟಿರುವ ಜಪಾನೀಯರ ಪೈಕಿ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಪಾನ್ ಸರಕಾರ ಗುರುವಾರ ತಿಳಿಸಿದೆ.

ವುಹಾನ್‌ನಿಂದ ಜಪಾನೀಯರನ್ನು ಹೊತ್ತ ಎರಡನೇ ವಿಮಾನವು ಟೋಕಿಯೊದಲ್ಲಿ ಇಳಿಯುತ್ತಿದ್ದಂತೆಯೇ ಈ ಘೋಷಣೆಯನ್ನು ಮಾಡಲಾಗಿದೆ.

ಇಲ್ಲಿಯವರೆಗೆ ವುಹಾನ್‌ನಿಂದ 400ಕ್ಕೂ ಅಧಿಕ ಜಪಾನೀಯರನ್ನು ತೆರವುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News