ಬಂದೂಕು ತೋರಿಸಿ 20 ಮಕ್ಕಳನ್ನು ಒತ್ತೆಯಾಳಾಗಿರಿಸಿದ ಕೊಲೆ ಆರೋಪಿ

Update: 2020-01-30 17:30 GMT

ಲಕ್ನೋ: ಕೊಲೆ ಆರೋಪಿಯೊಬ್ಬ ತನ್ನ ಪತ್ನಿ, ಒಂದು ವರ್ಷದ ಪುತ್ರಿ ಮತ್ತು 20ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳಾಗಿರಿಸಿದ ಘಟನೆ ಉತ್ತರ ಪ್ರದೇಶದ ಫಾರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಆತನ ಮನವೊಲಿಸಲು ಗ್ರಾಮಸ್ಥರು ಪ್ರಯತ್ನಿಸುತ್ತಿದ್ದಾರೆ.

ಕೊಲೆ ಆರೋಪಿಯನ್ನು ಸುಭಾಷ್ ಬತಾಮ್ ಎಂದು ಗುರುತಿಸಲಾಗಿದ್ದು,  ಮಕ್ಕಳನ್ನು ಆತ ಒತ್ತೆಯಾಳಾಗಿರಿಸಿ 5 ಗಂಟೆಗಳಾಗಿವೆ.

ತನ್ನ ಪುತ್ರಿಯ ಹುಟ್ಟುಹಬ್ಬದ ನೆಪದಲ್ಲಿ ಸುಭಾಷ್ ಮಕ್ಕಳನ್ನು ಮನೆಗೆ ಆಹ್ವಾನಿಸಿದ್ದ. ಮಕ್ಕಳು ಮನೆಯ ಒಳಗೆ ಪ್ರವೇಶಿಸಿದ ನಂತರ ಪತ್ನಿ, ಮಗಳು ಮತ್ತು ಇತರ ಮಕ್ಕಳಿಗೆ ಬಂದೂಕು ತೋರಿಸಿ ಒತ್ತೆಯಾಳಾಗಿ ಇರಿಸಿದ್ದಾನೆ.

ಮಕ್ಕಳು ಮನೆಗೆ ಹಿಂದುರಿಗಿಲ್ಲ ಎಂದು ಪೋಷಕರು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ಬಡಿದ ಗ್ರಾಮಸ್ಥರೆಡೆಗೆ ಸುಭಾಷ್ ಗುಂಡು ಹಾರಿಸಿದ್ದಾನೆ ಮತ್ತು ಕಚ್ಛಾ ಬಾಂಬ್ ಎಸೆದಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News