ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮನ

Update: 2020-02-01 04:06 GMT

ಲಂಡನ್: ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಪಡೆದ ನಿರ್ಗಮನ ಶುಕ್ರವಾರ ರಾತ್ರಿಯಿಂದ ಜಾರಿಗೆ ಬಂದಿದೆ. 2016ರ ಜೂನ್‌ನಲ್ಲಿ ಬ್ರೆಕ್ಸಿಟ್ ಪರ ಬ್ರಿಟನ್ ಸಂಸತ್ತು ನಿರ್ಣಯ ಆಂಗೀಕರಿಸಿದ ಹಿನ್ನೆಲೆಯಲ್ಲಿ 47 ವರ್ಷಗಳ ಸದಸ್ಯತ್ವದಿಂದ ಬ್ರಿಟನ್ ಹೊರಬಂದಿದೆ.

ಈ ಮಹಾ ನಿರ್ಗಮನಕ್ಕೆ ಮುನ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ "ಈ ಘಟನೆ ಹೊಸ ಯುಗಕ್ಕೆ ನಾಂದಿ ಹಾಡುವ ಐತಿಹಾಸಿಕ ಕ್ಷಣ" ಎಂದು ಬಣ್ಣಿಸಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆಗೆ ಸರಿಯಾಗಿ ಬ್ರಿಟನ್ ನಿರ್ಗಮನ ಜಾರಿಗೆ ಬಂದಿದೆ. "ಇದು ಮಬ್ಬು ಮರೆಯಾಗಿ, ಪರದೆ ತೆರೆ ಸರಿಸಿ ಹೊಸ ಯುಗಕ್ಕೆ ನಾಂದಿ ಹಾಡಿದ ಐತಿಹಾಸಿಕ ಕ್ಷಣ. ಇದರಿಂದ ಬ್ರಿಟನ್‌ನ ಅವಕಾಶ ಮತ್ತು ನಿರೀಕ್ಷೆ ಹೆಚ್ಚಲಿದೆ" ಎಂದು ವೀಡಿಯೊ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ.

"ಇದು ಕೇವಲ ಕಾನೂನಾತ್ಮಕ ಬೇರ್ಪಡೆಯಲ್ಲ; ಇದು ರಾಷ್ಟ್ರದ ನವೀಕರಣ ಮತ್ತು ಬದಲಾವಣೆಯ ಸಂಭಾವ್ಯ ಕ್ಷಣ. ಇದು ಹೊಸ ಯುಗದ ಆರಂಭದ ಪರ್ವಕಾಲ. ಇದರಿಂದಾಗಿ ಇನ್ನು ಮುಂದೆ ನಿಮ್ಮ ಜೀವನದ ಅವಕಾಶಗಳು ನೀವು ಹುಟ್ಟಿ ಬೆಳೆದ ದೇಶವನ್ನು ಅವಲಂಬಿಸಿರುತ್ತವೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News