ಸೆಮಿ ಫೈನಲ್‌ನಲ್ಲಿ ಪಾಕ್-ಭಾರತ ಹಣಾಹಣಿ

Update: 2020-02-01 18:38 GMT

ಜೋಹಾನ್ಸ್‌ಬರ್ಗ್, ಫೆ.1: ಆರಂಭಿಕ ಬ್ಯಾಟ್ಸ್‌ಮನ್ ಮುಹಮ್ಮದ್ ಹುರೈರಾ ಅವರ ಅರ್ಧಶತಕ ಹಾಗೂ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡ ಶುಕ್ರವಾರ ಅಫ್ಘಾನಿಸ್ತಾನ ತಂಡ ವನ್ನು ಆರು ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದೆ.

 ಪಾಕಿಸ್ತಾನ ಫೆ.4ರಂದು ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ, ಹಾಲಿ ಚಾಂಪಿಯನ್ ಭಾರತವನ್ನು ಎದುರಿಸಲಿದೆ.

ಭಾರತ ಮತ್ತೊಂದು ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿತ್ತು. ಭಾರತ ಹಾಗೂ ಪಾಕಿಸಾ್ತನ ಈ ತನಕ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 9 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಾಕಿಸ್ತಾನ 5 ಬಾರಿ ಜಯ ಸಾಧಿಸಿದರೆ, ಭಾರತ ತಂಡ ನಾಲ್ಕು ಬಾರಿ ಜಯಭೇರಿ ಬಾರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News