ಕೊರೋನಾ ವೈರಸ್ ಭೀತಿ: ಚೀನಾದ ಎಲ್ಲ ಅಂಗಡಿ, ಕಚೇರಿಗಳನ್ನು ಮುಚ್ಚಲು ಆ್ಯಪಲ್ ನಿರ್ಧಾರ

Update: 2020-02-02 15:51 GMT

ವಾಶಿಂಗ್ಟನ್, ಫೆ. 2: ಚೀನಾದಲ್ಲಿರುವ ತನ್ನ ಎಲ್ಲ ಅಧಿಕೃತ ಅಂಗಡಿಗಳು ಮತ್ತು ಕಾರ್ಪೊರೇಟ್ ಕಚೇರಿಗಳನ್ನು ಫೆಬ್ರವರಿ 9ರವರೆಗೆ ಮುಚ್ಚುವುದಾಗಿ ಅಮೆರಿಕದ ಫೋನ್ ಮತ್ತು ಕಂಪ್ಯೂಟರ್ ತಯಾರಿಕಾ ಕಂಪೆನಿ ಆ್ಯಪಲ್ ಶನಿವಾರ ಘೋಷಿಸಿದೆ.

ಚೀನಾದಲ್ಲಿ ಕೊರೋನಾವೈರಸ್ ಸೋಂಕಿನ ಬೆದರಿಕೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅದು ಈ ನಿರ್ಧಾರ ತೆಗೆದುಕೊಂಡಿದೆ.

‘‘ಎಚ್ಚರಿಕೆಯ ಕ್ರಮವಾಗಿ ಹಾಗೂ ಪ್ರಮುಖ ಆರೋಗ್ಯ ಪರಿಣತರ ಇತ್ತೀಚಿನ ಸಲಹೆಗೆ ಅನುಗುಣವಾಗಿ ಚೀನಾದಲ್ಲಿರುವ ಎಲ್ಲ ನಮ್ಮ ಕಾರ್ಪೊರೇಟ್ ಕಚೇರಿಗಳು, ಅಂಗಡಿಗಳು ಮತ್ತು ಸಂಪರ್ಕ ಕೇಂದ್ರಗಳನ್ನು ಫೆಬ್ರವರಿ 9ರವರೆಗೆ ಮುಚ್ಚುತ್ತಿದ್ದೇವೆ’’ ಎಂದು ಆ್ಯಪಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ‘ಸಾಧ್ಯವಾದಷ್ಟು ಬೇಗ’ ಅಂಗಡಿಗಳನ್ನು ತೆರೆಯುವುದನ್ನು ಎದುರುನೋಡುತ್ತಿದ್ದೇವೆ ಎಂದು ಕಂಪೆನಿ ತಿಳಿಸಿದೆ.

ಕಳೆದ ವಾರದ ಆರಂಭದಲ್ಲಿ, ಕೊರೋನವೈರಸ್ ಸೋಂಕಿನ ಹರಡುವುಕೆಯ ಹಿನ್ನೆಲೆಯಲ್ಲಿ ಚೀನಾದಲ್ಲಿರುವ ಮೂರು ಅಂಗಡಿಗಳನ್ನು ಚೀನಾ ಮುಚ್ಚಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News