ಆನ್‌ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆ: ನಾಲ್ವರು ಆರೋಪಿಗಳ ಬಂಧನ

Update: 2020-02-08 14:38 GMT

ಬೆಂಗಳೂರು, ಫೆ.8: ಆನ್‌ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 10 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ರಾಜಾಜಿನಗರದ ಕುಮಾರ್(38), ಬಿಟಿಎಂ ಲೇಔಟ್‌ನ ಭರತ್‌ ಕುಮಾರ್(36), ಈಜಿಪುರದ ರಘು(38), ಕೋಳಿಚಿಕ್ಕನ ಹಳ್ಳಿಯ ಪ್ರಜ್ವಲ್(36) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬೇರೆ ರಾಜ್ಯಗಳಿಂದ ಯುವತಿಯರನ್ನು ಉದ್ಯೋಗ ನೆಪದಲ್ಲಿ ಕರೆತಂದು, ಆನ್‌ಲೈನ್ ಮೂಲಕ ಯುವತಿಯರ ಫೋಟೊ ಕಳುಹಿಸಿ ಗ್ರಾಹಕರಿಂದ 15 ರಿಂದ 20 ಸಾವಿರದವರೆಗೆ ಪಡೆದು, ವಿಸ್ತಾರವಾದ ವೇಶ್ಯಾವಾಟಿಕೆ ಜಾಲವನ್ನು ಸೃಷ್ಟಿಸಿದ್ದರು ಎನ್ನಲಾಗಿದೆ.

ಹಲವು ವರ್ಷಗಳಿಂದ ಆರೋಪಿಗಳು ಈ ದಂಧೆ ನಡೆಸುತ್ತಿದ್ದರು. ಇವರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಪೊಲೀಸರ ಕಣ್ತಪ್ಪಿಸಿ ದಂಧೆ ನಡೆಸುತ್ತಿದ್ದರು. ಅಂತರ್ಜಾಲದ ಮೂಲಕವೇ ಕಾರ್ಯಾಚರಣೆ ನಡೆಸಿ ಆರೋಪಿಗಳ ಮಾಹಿತಿ ಪತ್ತೆ ಹಚ್ಚಿ ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News