ಅಂಡರ್-19 ವಿಶ್ವ ಕಪ್ ಗೆದ್ದ ಬಳಿಕ ಬಾಂಗ್ಲಾ ಕ್ರಿಕೆಟಿಗರ ಅತಿರೇಕದ ವರ್ತನೆ: ಮೈದಾನದಲ್ಲಿ ಜಟಾಪಟಿ

Update: 2020-02-10 11:01 GMT

ಹೊಸದಿಲ್ಲಿ : ದಕ್ಷಿಣ ಆಫ್ರಿಕಾದಲ್ಲಿ ರವಿವಾರ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿ  ಬಾಂಗ್ಲಾದೇಶ ಐತಿಹಾಸಿಕ ಜಯ ಗಳಿಸಿದ ಕೆಲವೇ ಕ್ಷಣಗಳಲ್ಲಿ ಎರಡೂ ತಂಡಗಳ ಕೆಲ ಆಟಗಾರರ ನಡುವೆ ವಾಗ್ವಾದ ಏರ್ಪಟ್ಟಿತು. 

ವಿಜಯೋತ್ಸಾಹದ ಭರದಲ್ಲಿ ಮೈದಾನದಲ್ಲಿ ಬಾಂಗ್ಲಾ ಆಟಗಾರರು ಅತಿರೇಕದಿಂದ ವರ್ತಿಸಿದ್ದಾರೆ. ಈ ಸಂದರ್ಭ ಪರಿಸ್ಥಿತಿ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಕೋಚ್ ಪಾರಸ್ ಮಾಂಬ್ರೆ ಹಾಗೂ ಅಂಪೈರುಗಳು ಮಧ್ಯಪ್ರವೇಶಿಸಿ ಯುವ ಕ್ರಿಕೆಟಿಗರನ್ನು ಸಮಾಧಾನಿಸಬೇಕಾಗಿ ಬಂದಿತ್ತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಾಂಗ್ಲಾದೇಶ ಕಪ್ತಾನ ಅಕ್ಬರ್ ಅಲಿ ನಂತರ ಮಾತನಾಡಿ ತಮ್ಮ ತಂಡದ ವರ್ತನೆಗೆ ಕ್ಷಮೆ ಕೋರಿದರು. ``ಏನಾಯಿತೆಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ  ನಡೆಯಬಾರದ್ದು ನಡೆದು ಹೋಯಿತು. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಅತಿರೇಕದ ಭಾವನೆಗಳು ಮೂಡುತ್ತವೆ. ಏನಿದ್ದರೂ ನಮ್ಮ ಎದುರಾಳಿ ತಂಡಕ್ಕೆ ಹಾಗೂ ನಮ್ಮ ಆಟಕ್ಕೆ ಗೌರವ ತೋರಿಸಬೇಕು, ಕ್ರಿಕೆಟ್ ಜಂಟಲ್ ಮ್ಯಾನ್ ಆಟ,'' ಎಂದರು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್, ``ಅಂತಿಮ ಪಂದ್ಯದಲ್ಲಿ ಸೋತ ಹೊರತಾಗಿಯೂ ತಂಡದ ಸದಸ್ಯರು ತಾಳ್ಮೆಯಿಂದಿದ್ದರು, ಸೋಲು, ಗೆಲುವು ಸಾಮಾನ್ಯ, ಆದರೆ ಅತ್ತ ಕಡೆಯ ವರ್ತನೆ ಕೆಟ್ಟದ್ದಾಗಿತ್ತು, ಇದು ನಡೆಯಬಾರದಾಗಿತ್ತು,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News