‘ಬಾಮಾ’ ಅಧ್ಯಕ್ಷರಾಗಿ ಸೈಯದ್ ಬಾವಾ ಬಣಕಲ್ ಪುನರಾಯ್ಕೆ

Update: 2020-02-10 11:36 GMT

ಸೌದಿ ಅರೇಬಿಯ, ಫೆ.10: ಬಜ್ಪೆ ಪರಿಸರದ 7 ಗ್ರಾಮಗಳ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವ ಧ್ಯೇಯೋದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಬಜ್ಪೆಏರಿಯಾ ಮೈನಾರಿಟಿ ಅಸೋಸಿಯೇಶನ್(ಬಾಮಾ) ಮಹಾಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಸ್ತ್‌ನ್ನೂರದಲ್ಲಿ ಜರುಗಿತು.

ಗತವರ್ಷದಲ್ಲಿ ಸಂಘಟನೆ ನಡೆಸಿದ ಕಾರ್ಯಚಟುವಟಿಕೆಗಳ ಬಗ್ಗೆ ಅವಲೋಕನ ಮಾಡಲಾಯಿತು. ಪ್ರಸಕ್ತ ವರ್ಷವೂ ಕ್ರೀಡಾ ಚಟುವಟಿಕೆಗಳನ್ನು ನಡೆಸಲು, ಬಾಮಾದ ಸಾಧನೆಗಳ ಬಗೆಗಿನ ಸ್ಮರಣ ಸಂಚಿಕೆ ಹೊರತರಲು ನಿರ್ಣಯಿಸಲಾಯಿತು. ಇದೇ ಸಂದರ್ಭ 2020-21ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸೈಯದ್ ಬಾವಾ ಬಣಕಲ್ ಪುನರಾಯ್ಕೆಯಾದರು. ಉಪಾಧ್ಯಾಕ್ಷರುಗಳಾಗಿ ರಶೀದ್ ಜುಬೈಲ್, ಶರೀಫ್ ಬಾದಾಮಿ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಬಜ್ಪೆಉಬೆಸ್ಕೊ, ಜೊತೆ ಕಾರ್ಯದರ್ಶಿಯಾಗಿ ಜಮಾಲ್ ಬಜ್ಪೆ, ಕೋಶಾಧಿಕಾರಿಯಾಗಿ ಶರೀಫ್ ಮಜಿಗುಡ್ಡೆ, ಸಹ ಕೋಶಾಧಿಕಾರಿಯಾಗಿ ಆಸಿಫ್ ಮದನಿ, ಈವೆಂಟ್ ಮ್ಯಾನೇಜರ್‌ರಾಗಿ ಇಬ್ರಾಹೀಂ, ಅಸಿಸ್ಟೆಂಟ್ ಈವೆಂಟ್ ಮ್ಯಾನೇಜರ್‌ರಾಗಿ ನೌಫಲ್, ಈವೆಂಟ್ ಕೋ-ಅರ್ಡಿನೇಟರ್ ರಾಗಿ ಬಶೀರ್ ಮದನಿ(ಜುಬೈಲ್), ಮುಫೀದ್, ಈವೆಂಟ್ ಕೋ ಆರ್ಡಿನೇಟರ್ (ದಮ್ಮಾಮ್) - ಹಮೀದ್ ಸುಂಕ ಶಾಲೆ, ಝುಬೈರ್, ಮತೀನ್ ಹಾಗೂ ಮೀಡಿಯಾ ಕೋ ಆರ್ಡಿನೇಟರ್ ಆಗಿ ಅಲ್ತಾಫ್ ಬಜ್ಪೆಆಯ್ಕೆಯಾದರು.

 ಚುನಾವಣಾಧಿಕಾರಿಗಳಾಗಿ ಅಹ್ಮದ್ ಶಕೀರ್ ಹಾಗೂ ಹಿದಾಯತುಲ್ಲಾ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ನಾಸಿರ್ ಬಜ್ಪೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News