ಕೊರೋನವೈರಸ್: 900 ದಾಟಿದ ಮೃತರ ಸಂಖ್ಯೆ

Update: 2020-02-10 17:14 GMT

ಬೀಜಿಂಗ್, ಫೆ. 10: ನೂತನ ಕೊರೋನವೈರಸ್‌ನಿಂದಾಗಿ ಚೀನಾದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸೋಮವಾರ 900ನ್ನು ದಾಟಿದೆ. ಅತ್ಯಂತ ಹೆಚ್ಚಿನ ಹಾನಿ ಅನುಭವಿಸಿರುವ ಚೀನಾದ ಹುಬೈ ಪ್ರಾಂತದಲ್ಲಿ ಒಂದು ದಿನದ ಅವಧಿಯಲ್ಲಿ ಇನ್ನೂ 91 ಮಂದಿ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ ಈಗ 39,800ಕ್ಕೆ ಏರಿದೆ.

ರೋಗ ಹರಡುವುದನ್ನು ತಡೆಯುವುದಕ್ಕಾಗಿ ಹುಬೈ ಪ್ರಾಂತದಲ್ಲಿ ಕೋಟ್ಯಂತರ ಜನರು ಬೀಗಮುದ್ರೆಯಲ್ಲಿದ್ದಾರೆ. ಅವರು ತಮ್ಮ ಮನೆ ಬಿಟ್ಟು ಬೇರೆಲ್ಲಿಗೂ ಹೋಗುವಂತಿಲ್ಲ.

‘‘ಎಷ್ಟು ಸಾಧ್ಯವೋ ಅಷ್ಟು ಸಮಯ ಮನೆಯಲ್ಲಿಯೇ ಇರಿ ಎಂದು ಸರಕಾರ ಹೇಳುತ್ತಿದೆ. ಆದರೆ ನಾವು ಅಂಗಡಿಗೆ ಹೋದಾಗೆಲೆಲ್ಲ ನಮಗೆ ಬೇಕಾದಷ್ಟು ವಸ್ತುಗಳು ಸಿಗುತ್ತಿಲ್ಲ. ಹಾಗಾಗಿ, ನಾವು ಆಗಾಗ ಅಂಗಡಿಗೆ ಹೋಗಬೇಕಾಗುತ್ತದೆ’’ ಎಂದು ವುಹಾನ್‌ನಲ್ಲಿ ಮಹಿಳೆಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News