ಯುಪಿಎಸ್‍ಸಿ ಅಂಕಗಳ ಆಧಾರದಲ್ಲಿ ಖಾಸಗಿ ಉದ್ಯೋಗದ ಸಾಧ್ಯತೆ

Update: 2020-02-12 06:32 GMT

ಹೊಸದಿಲ್ಲಿ : ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಿವಿಲ್ ಸರ್ವಿಸಸ್ ಹಾಗೂ ಇಂಡಿಯನ್ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಗಳಲ್ಲಿ ಉನ್ನತ ರ್ಯಾಂಕ್ ಗಿಟ್ಟಿಸುವ ಅಭ್ಯರ್ಥಿಗಳನ್ನು ನೇಮಕಾತಿಗೊಳಿಸಲು ಖಾಸಗಿ ರಂಗಕ್ಕೆ ಮೋದಿ ಸರಕಾರ ಮೊದಲ ಬಾರಿ ಅನುಮತಿಯನ್ನು 2017ರಲ್ಲಿ ನೀಡಿದಂದಿನಿಂದ ಈ ಯೋಜನೆ  ಸಾಕಷ್ಟು ಜನಪ್ರಿಯವಾಗಿದ್ದು ಕಳೆದೆರಡು ವರ್ಷಗಳಲ್ಲಿ ತಮ್ಮ ಯುಪಿಎಸ್‍ಸಿ ಅಂಕಗಳ ಆಧಾರದಲ್ಲಿ ಖಾಸಗಿ ಕಂಪೆನಿಗಳಲ್ಲಿ ನೇಮಕಾತಿಗೊಳ್ಳುವ  ಆಯ್ಕೆಯನ್ನು ಮಾಡಿರುವ ಅಭ್ಯರ್ಥಿಗಳ ಸಂಖ್ಯೆ ಶೇ. 1,650ರಷ್ಟು  ಏರಿಕೆಯಾಗಿದೆ.

ಇಂತಹ ಒಂದು ಆಯ್ಕೆ ಮಾಡುವ ಅವಕಾಶ ಯುಪಿಎಸ್‍ಸಿ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಸಂದರ್ಶನ ಹಂತದ ತನಕ ಬಂದು ನಂತರ ಆಯ್ಕೆಯಾಗದ ಅಭ್ಯರ್ಥಿಗಳಿಗಿದೆ. 2017ರಲ್ಲಿ ಇಂತಹ 800 ಅಭ್ಯರ್ಥಿಗಳು  ಖಾಸಗಿ ರಂಗದ ಉದ್ಯೋಗಕ್ಕೆ ನೇಮಕಾತಿಗೊಳ್ಳಲು ಇಚ್ಛೆ ವ್ಯಕ್ತಪಡಿಸಿ ತಮ್ಮ ಸ್ಕೋರ್‍ಗಳನ್ನು ಯುಪಿಎಸ್‍ಸಿಯ ಇಂಟಗ್ರೇಟೆಡ್ ಇನ್ಫಾಮೇರ್ಶನ್ ಸಿಸ್ಟಂನಲ್ಲಿ ಅಪ್ಲೋಡ್ ಮಾಡಿದ್ದರೆ ಅವರ ಪೈಕಿ 200 ಮಂದಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಲಭಿಸಿದೆ. 2018ರಲ್ಲಿ ಖಾಸಗಿ ರಂಗದಲ್ಲಿ ತಮ್ಮ ಸ್ಕೋರ್ ಆಧಾರದಲ್ಲಿ ಉದ್ಯೋಗ ಪಡೆಯಲಿಚ್ಛಿಸಿದ ಅಭ್ಯರ್ಥಿಗಳ ಸಂಖ್ಯೆ 14,000 ಆಗಿದ್ದರೆ  ಅವರಲ್ಲಿ 500 ಮಂದಿಗೆ ಈ ಮೂಲಕ ಉದ್ಯೋಗ ಲಭಿಸಿದೆ. ಕಳೆದ ವರ್ಷ  14,000 ಮಂದಿ ಈ ಅವಕಾಶವನ್ನು ಆಯ್ಕೆ ಮಾಡಿದ್ದರು.

ಯುಪಿಎಸ್‍ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಸರಕಾರಿ ನೇಮಕಾತಿ ಪ್ರಮಾಣ ಇಳಿಮುಖವಾಗುತ್ತಿರುವ ಹಂತದಲ್ಲಿ ಮೇಲಿನ ಬೆಳವಣಿಗೆ  ನಡೆದಿದೆ. ಆರ್ಥಿಕ ವರ್ಷ 2028-19ರಲ್ಲಿ ಕೇವಲ 2,352 ಅಭ್ಯರ್ಥಿಗಳನ್ನು ಯುಪಿಎಸ್‍ಸಿ ಮೂಲಕ ಆಯ್ಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News