ಇರಾನ್ ಮೇಲೆ ದಾಳಿ ನಡೆಸದಂತೆ ಟ್ರಂಪ್ ರನ್ನು ನಿರ್ಬಂಧಿಸಿದ ಸೆನೆಟ್

Update: 2020-02-14 15:08 GMT
ಫೈಲ್ ಚಿತ್ರ

ವಾಶಿಂಗ್ಟನ್, ಫೆ. 14: ಇರಾನ್ ಮೇಲೆ ದಾಳಿ ನಡೆಸದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ನಿರ್ಬಂಧಿಸುವ ನಿರ್ಣಯದ ಪರವಾಗಿ ಅಮೆರಿಕದ ಸೆನೆಟ್ ಗುರುವಾರ ಮತ ಹಾಕಿದೆ ಹಾಗೂ ಅಧ್ಯಕ್ಷರ ವಿದೇಶ ನೀತಿಯನ್ನು ಕಟುವಾಗಿ ಟೀಕಿಸಿದೆ.

ಇದೇ ಸೆನೆಟ್ ಒಂದು ವಾರದ ಮೊದಲು, ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯವನ್ನು ತಿರಸ್ಕರಿಸಿತ್ತು ಹಾಗೂ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತ್ತು.

ಕಾಂಗ್ರೆಸ್‌ ನಿಂದ ಸ್ಪಷ್ಟ ನಿರ್ಣಯ ಅಂಗೀಕಾರಗೊಳ್ಳದೆ, ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ನಿಷೇಧಿಸುವ ನಿರ್ಣಯದ ಪರವಾಗಿ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರ ಜೊತೆಗೆ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ 8 ಸೆನೆಟರ್‌ಗಳೂ ಮತ ಹಾಕಿದರು. ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು ಬಹುಮತ ಹೊಂದಿದೆ.

ಡೆಮಾಕ್ರಟಿಕ್ ಪಕ್ಷದ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ‌ನಲ್ಲಿ ಈ ನಿರ್ಣಯ ಕಳೆದ ತಿಂಗಳು ಅಂಗೀಕಾರಗೊಂಡಿದೆ. ಆದರೆ, ಈ ನಿರ್ಣಯಕ್ಕೆ ಅಧ್ಯಕ್ಷ ಟ್ರಂಪ್ ವೀಟೊ ಚಲಾಯಿಸಬಹುದಾಗಿದೆ. ವೀಟೊವನ್ನು ಹಿಮ್ಮೆಟ್ಟಿಸಲು ಸಂಸತ್ತು ಕಾಂಗ್ರೆಸ್‌ನಲ್ಲಿ ಮೂರನೇ ಎರಡು ಬಹುಮತ ಅಗತ್ಯವಾಗಿದೆ. ಆದರೆ, ಪ್ರತಿಪಕ್ಷ ಅಷ್ಟು ಬಹುಮತವನ್ನು ಹೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News