ಗಿರಿರಾಜ್ ಸಿಂಗ್ ಹಾರ ಹಾಕಿದ ಅಂಬೇಡ್ಕರ್ ಮೂರ್ತಿಯನ್ನು ಸ್ವಚ್ಛಗೊಳಿಸಿದ ಆರ್‌ಜೆಡಿ

Update: 2020-02-16 07:03 GMT

ಬೆಗುಸರಾಯ್, ಫೆ.15: ಜಿಲ್ಲೆಯ ಸಾಹೆಬ್‌ಪುರ್ ಕಮಲ್‌ಗೆ ಭೇಟಿ ನೀಡಿದ್ದ ಬೆಗುಸರಾಯ್ ಸಂಸದ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬಾಬಾಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡಿದ್ದರು. ಆ ಬಳಿಕ ಆರ್‌ಜೆಡಿ ಹಾಗೂ ಎಡ ಪಕ್ಷಗಳ ನಾಯಕರು ಅಂಬೇಡ್ಕರ್ ಮೂರ್ತಿಗೆ ನೀರನ್ನು ಚುಮುಕಿಸಿ ಶುದ್ದ ಮಾಡಿದ್ದರು.

ಅಂಬೇಡ್ಕರ್ ಮೂರ್ತಿಯನ್ನು ಶುದ್ದಗೊಳಿಸುತ್ತಿರುವ ವಿಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿದೆ. ಇಬ್ಬರು ವ್ಯಕ್ತಿಗಳು ಬಕೆಟ್‌ನಲ್ಲಿ ನೀರು ಕೊಂಡೊಯ್ದು, ಅಂಬೇಡ್ಕರ್ ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದಾರೆ. ಬಳಿಕ ‘ಜೈ ಭೀಮ್’ ಎಂದು ಘೋಷಣೆ ಕೂಗಿದ್ದಾರೆ.

‘‘ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ನಮನ ಸಲ್ಲಿಸುವ ಎಲ್ಲ ಹಕ್ಕು ಗಿರಿರಾಜ್ ಸಿಂಗ್‌ಗೆ ಇದೆ. ಕಮ್ಯುನಿಸ್ಟರ್ ಹಾಗೂ ಆರ್‌ಜೆಡಿ ಪಕ್ಷದವರು ಅಂಬೇಡ್ಕರ್ ಪ್ರತಿಮೆಯನ್ನು ಶುದ್ದೀಕರಿಸಿದ್ದು ಅವಮಾನಕರ ಹಾಗೂ ಶೋಚನೀಯ. ಆರ್‌ಜೆಡಿ ಹಾಗೂ ಸಿಪಿಐ ಪಕ್ಷಗಳು ಇದಕ್ಕೆ ಕ್ಷಮೆಯಾಚಿಸಲೇ ಬೇಕು’’ ಎಂದು ಬಿಜೆಪಿ ವಕ್ತಾರ ನಿಖಿಲ್ ಆನಂದ್ ಆಗ್ರಹಿಸಿದ್ದಾರೆ.

‘‘ಇಂತಹ ಘಟನೆಯಲ್ಲಿ ನಮ್ಮ ಪಕ್ಷದ ನಾಯಕರು ಭಾಗಿಯಾಗಿರುವ ಬಗ್ಗೆ ನಮಗೆ ಗೊತ್ತಿಲ್ಲ. ಇಂತಹ ಕೆಲಸ ಮಾಡುವುದು ಬಿಜೆಪಿಯ ಸಂಸ್ಕೃತಿ’’ ಎಂದು ಸಿಪಿಐ ಕಾರ್ಯದರ್ಶಿ ಸತ್ಯನಾರಾಯಣ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News