ಬೈಕ್ ವೀಲ್ಹಿಂಗ್: ಹತ್ತು ಮಂದಿ ಯುವಕರ ಬಂಧನ

Update: 2020-02-16 14:51 GMT

ಬೆಂಗಳೂರು, ಫೆ. 16: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಗಳ ಪೈಕಿ ನಾಲ್ವರ ವಾಹನ ಚಾಲನ ಪರವಾನಿಗೆಯನ್ನು ರದ್ದುಗೊಳಿಸಿ ಆರ್‌ಟಿಓ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ.

ಬಂಧಿತ ಆರೋಪಿಗಳನ್ನು ಪರಮೇಶ್(21), ಅಜಂ ಪಾಷಾ(19), ಪ್ರಶಾಂತ ಕುಮಾರ್ (19), ಮುಖೇಶ್(22), ಹೇಮಂತ(21), ವಿಶಾಲ್(19), ಶಾಬುದ್ದೀನ್ (19), ಆನಂದ್‌ ಕುಮಾರ್(23), ಸುನೀಲ್ (19) ಹಾಗೂ ತಾಜುದ್ದೀನ್ (23) ಎಂದು ಗುರುತಿಸಲಾಗಿದೆ.

ಆರೋಪಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಬೈಕ್ ವೀಲ್ಹಿಂಗ್ ಮೂಲಕ ಪಾದಚಾರಿಗಳು ಹಾಗೂ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದರು. 10 ಬೈಕ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News