ಕುಸ್ತಿ ಚಾಂಪಿಯನಶಿಪ್‌ನಲ್ಲಿ ಭಾಗವಹಿಸಲಿರುವ ಪಾಕ್

Update: 2020-02-17 03:22 GMT

  ಹೊಸದಿಲ್ಲಿ, ಫೆ.16: ಪಾಕಿಸ್ತಾನದ ಕುಸ್ತಿಪಟುಗಳು ವೀಸಾಗಳನ್ನು ಪಡೆದ ಬಳಿಕ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅನಿಶ್ಚಿತತೆಯು ದೂರವಾಗಿದೆ. ಆದರೆ ಚೀನಾದ ಕುಸ್ತಿಪಟುಗಳ ಭವಿಷ್ಯವು ಸೋಮವಾರ ತಿಳಿಯಲಿದೆ ಎಂದು ರಾಷ್ಟ್ರೀಯ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಭಾರತದ ಕುಸ್ತಿ ಫೆಡರೇಶನ್ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರು ಪಾಕಿಸ್ತಾನದ ಕುಸ್ತಿ ತಂಡಕ್ಕೆ ವೀಸಾ ನೀಡಲಾಗಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

 ಫೆಬ್ರವರಿ 18 ರಿಂದ 23 ರವರೆಗೆ ಭಾರತದಲ್ಲಿ ನಡೆಯಲಿರುವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ನಾಲ್ಕು ಫ್ರೀಸ್ಟೈಲ್ ಕುಸ್ತಿಪಟುಗಳು, ಒಬ್ಬ ಕೋಚ್ ಮತ್ತು ಒಬ್ಬ ರೆಫರಿಯನ್ನು ಕಳುಹಿಸಿಕೊಡಲಿದೆ. ಪಾಕಿಸ್ತಾನದ ನಾಲ್ಕು ಕುಸ್ತಿಪಟುಗಳು ಮುಹಮ್ಮದ್ ಬಿಲಾಲ್ (57 ಕೆ.ಜಿ), ಅಬ್ದುಲ್ ರೆಹಮಾನ್ (74 ಕೆ.ಜಿ), ತಯಾಬ್ ರಝಾ (97 ಕೆ.ಜಿ) ಮತ್ತು ಜಮಾನ್ ಅನ್ವರ್ (125 ಕೆ.ಜಿ) ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News