ಭಾರತೀಯ ಕ್ರಿಕೆಟಿಗರ ಸಂಘಕ್ಕೆ ಬಿಸಿಸಿಐ 2 ಕೋಟಿ ರೂ.

Update: 2020-02-17 03:33 GMT

 ಹೊಸದಿಲ್ಲಿ, ಫೆ. 16: ಭಾರತೀಯ ಕ್ರಿಕೆಟಿಗರ ಸಂಘಕ್ಕೆ (ಐಸಿಎ) ರವಿವಾರ ಬಿಸಿಸಿಐ 2 ಕೋಟಿ ರೂ. ಅನುದಾನ ನೀಡಿದೆ.

    ಸುಪ್ರೀಂ ಕೋರ್ಟ್ ನೇಮಕ ಮಾಡಿದ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ರೂಪುಗೊಂಡ ಭಾರತದ ಮೊಟ್ಟಮೊದಲ ಆಟಗಾರರ ಸಂಘವಾಗಿರುವ ಐಸಿಎ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಚನೆಯಾದ ಬಳಿಕ ತನ್ನ ಕಾರ್ಯಾಚರಣೆಗೆ 15-20 ಕೋಟಿ ರೂ.ಗಳ ತಾತ್ಕಾಲಿಕ ಬಜೆಟ್‌ನ್ನು ಸಿದ್ಧಪಡಿಸಿತ್ತು ಮತ್ತು 5 ಕೋಟಿ ರೂ.ಗಳ ಆರಂಭಿಕ ಅನುದಾನವನ್ನು ಬಯಸಿತ್ತು. ಆದರೆ ಇದೀಗ 2 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಇದು ಮುಂಬೈನಲ್ಲಿ ಕಚೇರಿ ತೆರೆಯಲು ಐಸಿಎಗೆ ಅನುಕೂಲವಾಗಲಿದೆ.

ಐಸಿಎಗೆ 2 ಕೋಟಿ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಅನುದಾನವನ್ನು ಬಯಸಿದರೆ, ನಾವು ಹೆಚ್ಚಿನದನ್ನು ಮಂಜೂರು ಮಾಡುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ರವಿವಾರ ಇಲ್ಲಿ ನಡೆದ ಬಿಸಿಸಿಐನ ಸುಪ್ರೀಂ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 ಐಸಿಎ ಆರಂಭಿಕ ಅನುದಾನವನ್ನು ಪಡೆದಿದೆ ಆದರೆ ದೀರ್ಘಾವಧಿಯಲ್ಲಿ ಕಾರ್ಯಾಚರಣೆಗೆ ಅಗತ್ಯದ ಫಂಡನ್ನು ಸ್ವಂತವಾಗಿ ಸಂಗ್ರಹಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News