ಲೋಕಾಯುಕ್ತಕ್ಕೆ ಬಲ ಬರಲಿ

Update: 2020-02-17 18:39 GMT

ಮಾನ್ಯರೇ,

2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿಯ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರದೊಂದಿಗೆ ಲೋಕಾಯುಕ್ತ ಸಂಸ್ಥೆಯನ್ನು ಮರು ಸ್ಥಾಪಿಸುವುದು ಅದರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು.

ಕರ್ನಾಟಕ ಲೋಕಾಯುಕ್ತಕ್ಕೆ ಇಡೀ ದೇಶದಲ್ಲೇ ತನ್ನದೇ ಆದ ಘನತೆ-ಗೌರವ ವ್ಯಕ್ತಿತ್ವವಿದೆ. ಭ್ರಷ್ಟಾಚಾರದಲ್ಲೇ ಮುಳುಗಿ ತಿಂದು ತೇಗಿರುವ ದೊಡ್ಡದೊಡ್ಡ ತಿಮಿಂಗಿಲಗಳನ್ನು ಬಲೆಗೆ ಕೆಡವಿ ಜನರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದ ಸಂವಿಧಾನಬದ್ಧ ಸಂಸ್ಥೆ ಲೋಕಾಯುಕ್ತದ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸುವ ಜೊತೆಗೆ ಸಂಸ್ಥೆಯ ಬಲವರ್ಧನೆ ಮಾಡಿ ಆಡಳಿತದಲ್ಲಿ ಪಾರದರ್ಶಕತೆ ಮೂಡಿಸುವ ಪ್ರಯತ್ನವಾಗಲೇಬೇಕು. ಇದೀಗ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಿದ್ದು, ಈ ಸರಕಾರ ಲೋಕಾಯುಕ್ತದ ಬಲವರ್ಧನೆ ಮಾಡುವತ್ತ ಮೊದಲು ಗಮನಹರಿಸಬೇಕಾಗಿದೆ. ಸರಕಾರದ ಮೇಲೆ ಜನರ ವಿಶ್ವಾಸ ನಂಬಿಕೆ ಇಮ್ಮಡಿಯಾಗಬೇಕಾಗಿದ್ದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿದ್ದರೆ ಲೋಕಾಯುಕ್ತಕ್ಕೆ ಬಲತುಂಬಬೇಕು. ಈ ಮೂಲಕ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು. ಕರ್ನಾಟಕದ ಲೋಕಾಯುಕ್ತ ಮತ್ತೆ ತನ್ನ ಗತಕಾಲದ ವೈಭವಕ್ಕೆ ಮರಳುವ ಎಲ್ಲಾ ಪ್ರಯತ್ನವನ್ನು ಸರಕಾರ ಮಾಡಬೇಕು.

-ಮುರುಗೇಶ ಡಿ., ದಾವಣಗೆರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News