​ತಾಯಿಯ ಮೃತದೇಹಕ್ಕಾಗಿ ಮುಂಬೈ ದಂತವೈದ್ಯನ ಹೋರಾಟ

Update: 2020-02-18 04:04 GMT
ಫೋಟೊ ಕೃಪೆ : ndtv.com

ಮುಂಬೈ : ಭಾರತೀಯ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಿದರೆ ತನ್ನ ತಾಯಿಯ ಅಂತ್ಯಸಂಸ್ಕಾರವನ್ನು ಶೀಘ್ರವಾಗಿ ನೆರವೇರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಮುಂಬೈನ 35 ವರ್ಷ ವಯಸ್ಸಿನ ದಂತವೈದ್ಯ ಪುನೀತ್ ಮೆಹ್ರಾ.

ಮೂರು ವಾರಗಳಿಂದ ಆ ದಿನಕ್ಕಾಗಿ ಮೆಹ್ರಾ ಎದುರು ನೋಡುತ್ತಿದ್ದಾರೆ. ತಾಯಿ ರಿತಾ ಮೆಹ್ರಾ ಆಸ್ಟ್ರೇಲಿಯಾದಿಂದ ಮುಂಬೈಗೆ ಮರಳುವ ವೇಳೆ ವಿಮಾನದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಏರ್ ಚೈನಾ ವಿಮಾನ ಝೆಂಗ್‌ಹುವಾ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿದು ಮೃತದೇಹವನ್ನು ಪ್ರಾಂತೀಯ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ 24 ದಿನಗಳ ಬಳಿಕವೂ ತಾಯಿಯ ಮೃತದೇಹ ಭಾರತಕ್ಕೆ ಬಾರದಿರುವ ಬಗ್ಗೆ ಮೆಹ್ರಾ ಆತಂಕಿತರಾಗಿದ್ದಾರೆ.

"ಸಮಸ್ಯೆ ನನಗೆ ಅರ್ಥವಾಗುತ್ತಿದೆ. ಈ ಬಗ್ಗೆ ಪ್ರಧಾನಿ, ರಾಷ್ಟ್ರಪತಿ, ವಿದೇಶಾಂಗ ಸಚಿವಾಲಯಕ್ಕೂ ಪತ್ರ ಬರೆದಿದ್ದೇನೆ. ಆದರೂ ತಾಯಿಯ ಮೃತದೇಹ ಇನ್ನೂ ಸಿಗುವ ಸೂಚನೆಗಳು ಕಾಣುತ್ತಿಲ್ಲ. ಯಾವಾಗ ಬರುತ್ತದೆಯೋ ಎನ್ನುವುದು ತಿಳಿಯುತ್ತಿಲ್ಲ" ಎಂದು ಪುನೀತ್ ವಿವರಿಸಿದ್ದಾರೆ.

ಪ್ರಸ್ತುತ ಹೆನನ್ ಪ್ರಾಂತ್ಯದ ಪ್ರಾಂತೀಯ ಆಸ್ಪತ್ರೆಯಲ್ಲಿ ರೀತಾ ಮೆಹ್ರಾ ಅವರ ಪಾರ್ಥಿವ ಶರೀರವಿದ್ದು, ಶೀಘ್ರವೇ ಅಂತ್ಯಸಂಸ್ಕಾರಕ್ಕೆ ಅವಕಾಶವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಕುಟುಂಬ ಇದೆ. ಚೀನಾಗೆ ಈ ವಾರ ವೈದ್ಯಕೀಯ ನೆರವು ನೀಡುವ ಸಲುವಾಗಿ ವಿಶೇಷ ವಿಮಾನ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ವಿಮಾನದಲ್ಲಿ ಮೃತದೇಹ ತರಲು ವ್ಯವಸ್ಥೆ ಮಾಡಿಕೊಡುವಂತೆ ಮೆಹ್ರಾ ಮನವಿ ಮಾಡಿದ್ದಾರೆ.

"ನಾನು ಭಾರತಕ್ಕೆ ಬಂದು 24 ದಿನ ಕಳೆದರೂ ತಾಯಿ ಮಾತ್ರ ಅಲ್ಲೇ ಇದ್ದಾರೆ. ಪ್ರಧಾನಿ, ರಾಷ್ಟ್ರಪತಿ, ರಾಯಭಾರ ಕಚೇರಿಗೆ ಈ ಬಗ್ಗೆ ಇ-ಮೇಲ್ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದ್ದಾರೆ. ಚೀನಾದಲ್ಲಿ ಸ್ಮಶಾನ ಮತ್ತು ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ಭಾರತೀಯ ರಾಯಭಾರ ಕಚೇರಿಯ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News