ಅಹ್ಮದಾಬಾದ್‌ನ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಉದ್ಘಾಟಿಸಲಿದ್ದಾರೆ ಟ್ರಂಪ್

Update: 2020-02-19 05:00 GMT

ಅಹ್ಮದಾಬಾದ್, ಫೆ.18: ಇದೇ ಮೊದಲ ಬಾರಿ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಮೊದಲ ದಿನವಾದ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ರಾಜಧಾನಿ ಅಹ್ಮದಾಬಾದ್‌ಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶ್ವದ ಅತ್ಯಂತ ದೊಡ್ಡದಾಗಿರುವ ಕ್ರಿಕೆಟ್ ಸ್ಟೇಡಿಯಂನ್ನು ಉದ್ಘಾಟಿಸಲಿದ್ದಾರೆ.

1,10,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಮೊಟೆರಾ ಸ್ಟೇಡಿಯಂ ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣವೆಂಬ ಹಿರಿಮೆಗೆ ಪಾತ್ರವಾಗಿದ್ದ ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಮೀರಿ ನಿಂತಿದೆ. ನೂತನ ಕ್ರಿಕೆಟ್ ಸ್ಟೇಡಿಯಂನ ಸುತ್ತಮುತ್ತ ರಸ್ತೆಗಳ ಅಗಲೀಕರಣಕ್ಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 2 ಪ್ರಾಧಿಕಾರಗಳು ಈಗಾಗಲೇ ಸುಮಾರು 300 ಮಿಲಿಯನ್ ರೂಪಾಯಿ(4.2 ಮಿಲಿಯನ್ ಡಾಲರ್)ವ್ಯಯಿಸಿವೆೆ. ನಗರದ ಸೌಂದರೀಕರಣಕ್ಕಾಗಿ 60 ಮಿಲಿಯನ್ ರೂ. ಖರ್ಚು ಮಾಡಲಾಗಿದೆ ಎಂದು ಅಹ್ಮದಾಬಾದ್ ಮಹಾನಗರ ಪಾಲಿಕೆಯ ಆಯುಕ್ತ ವಿಜಯ ನೆಹ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News