ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಪೈನಲ್ ಪಂದ್ಯಕ್ಕೆ ನವಿಮುಂಬೈ ಆತಿಥ್ಯ

Update: 2020-02-19 05:16 GMT

ಹೊಸದಿಲ್ಲಿ, ಫೆ.18: ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಟೂರ್ನಿಯ ನವೆಂಬರ್ 2ರಿಂದ 21ರ ತನಕ ನಡೆಯಲಿದೆ. ಉದ್ಘಾಟನಾ ಪಂದ್ಯ ಗುವಾಹಟಿಯಲ್ಲಿ ನಡೆದರೆ, ಫೈನಲ್ ಪಂದ್ಯಕ್ಕೆ ನವಿ ಮುಂಬೈ ಆತಿಥ್ಯವಹಿಸಿಕೊಳ್ಳಲಿದೆ. ವಿಪರೀತ ಫುಟ್ಬಾಲ್ ಕ್ರೇಝ್ ಹೊಂದಿರುವ ಕೋಲ್ಕತಾ ಸಹಿತ ಐದು ಆತಿಥ್ಯ ನಗರಗಳ ಹೆಸರನ್ನು ಆಯೋಜನ ಸಮಿತಿಯು ಮಂಗಳವಾರ ಘೋಷಿಸಿದೆ.

ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು 32 ಪಂದ್ಯಗಳಲ್ಲಿ ಸ್ಪರ್ಧಿಸಲಿದ್ದು, ಅಹ್ಮದಾಬಾದ್, ಭುವನೇಶ್ವರ, ಗುವಾಹಟಿ, ಕೋಲ್ಕತಾ ಹಾಗೂ ನವಿ ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ. ಗ್ರೂಪ್ ಹಂತದ ಪಂದ್ಯಗಳಿಗೆ ನಾಲ್ಕು ನಗರಗಳು(ಅಹ್ಮದಾಬಾದ್, ಭುವನೇಶ್ವರ, ಗುವಾಹಟಿ, ಕೋಲ್ಕತಾ) ಆತಿಥ್ಯವಹಿಸಿಕೊಳ್ಳಲಿವೆ.

‘‘ಭಾರತ ಮತ್ತೊಂದು ಫಿಫಾ ಸ್ಪರ್ಧೆಯ ಆತಿಥ್ಯಕ್ಕೆ ತಯಾರಿ ನಡೆಸುತ್ತಿದೆ. ಈ ಟೂರ್ನಮೆಂಟ್ ಭಾರೀ ಯಶಸ್ಸು ಕಾಣಲು ಇಡೀ ದೇಶದ ಜನತೆಯ ಬೆಂಬಲ ನೀಡುವ ನಿರೀಕ್ಷೆಯಲ್ಲಿದ್ದೇನೆ. ನಮ್ಮ ಅಂಡರ್-17 ಮಹಿಳಾ ತಂಡ ಇದೇ ಮೊದಲ ಬಾರಿ ಫಿಫಾ ಟೂರ್ನಮೆಂಟ್‌ನಲ್ಲಿ ಆಡುತ್ತಿದೆ’’ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ವಿಶ್ವಕಪ್ ನಡೆಯಲಿರುವ ಐದು ತಾಣಗಳು

►ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಸ್ಟೇಡಿಯಂ: ಗುವಾಹಟಿ

ಡಿ.ವೈ.ಪಾಟೀಲ್ ಸ್ಟೇಡಿಯಂ: ನವಿಮುಂಬೈ

►ಸಾಲ್ಟ್ ಲೇಕ್ ಸ್ಟೇಡಿಯಂ: ಕೋಲ್ಕತಾ

►ಟ್ರಾನ್ಸ್‌ಸ್ಟಾಡಿಯಾ ಸ್ಟೇಡಿಯಂ: ಅಹ್ಮದಾಬಾದ್

►ಕಳಿಂಗ ಸ್ಟೇಡಿಯಂ: ಭುವನೇಶ್ವರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News