ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ವಿಶತಕ

Update: 2020-02-19 05:20 GMT

ಬೆಂಗಳೂರು, ಫೆ.18: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಶಾಲಾ ಮಟ್ಟದ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಬಿಟಿಆರ್ ಶೀಲ್ಡ್ ಅಂಡರ್-14 ಗ್ರೂಪ್ 1, ಡಿವಿಜನ್-2 ಟೂರ್ನಮೆಂಟ್‌ನಲ್ಲಿ ತನ್ನ ಶಾಲೆ ಮಲ್ಯ ಅದಿತಿ ಇಂಟರ್‌ನ್ಯಾಶನಲ್‌ನ್ನು ಪ್ರತಿನಿಧಿಸಿದ ಸಮಿತ್ ಶನಿವಾರ ನಡೆದ ಪಂದ್ಯದಲ್ಲಿ ಕೇವಲ 146 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಇದರಲ್ಲಿ 33 ಬೌಂಡರಿಗಳಿವೆ.

ಸಮಿತ್ ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ದ್ವಿಶತಕ ದಾಖಲಿಸಿದರು. ಸಮಿತ್ ನೇತೃತ್ವದ ತಂಡ ಶ್ರೀ ಕುಮಾರನ್ ಚಿಲ್ಡ್ರನ್ಸ್ ಅಕಾಡಮಿ ವಿರುದ್ಧ 50 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 377 ರನ್ ಗಳಿಸಿದೆ. ಮಲ್ಯ ಅದಿತಿ ಇಂಟರ್‌ನ್ಯಾಶನಲ್ ತಂಡ ಪಂದ್ಯವನ್ನು 267 ರನ್‌ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿತು. ಸಮಿತ್ ಎರಡು ವಿಕೆಟ್‌ಗಳನ್ನು ಉರುಳಿಸಿದರು.

 2019ರ ಡಿಸೆಂಬರ್‌ನಲ್ಲಿ ಸಮಿತ್ ಅಂಡರ್-14 ಅಂತರ್-ವಲಯ ಟೂರ್ನಮೆಂಟ್‌ನಲ್ಲಿ ಉಪಾಧ್ಯಕ್ಷ ಇಲೆವೆನ್ ಪರವಾಗಿ ಧಾರವಾಡ ವಿರುದ್ಧ 256 ಎಸೆತಗಳಲ್ಲಿ 201 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಸಮಿತ್ 3 ವಿಕೆಟ್‌ಗಳನ್ನು ಪಡೆದಿದ್ದರು.

ಸಮಿತ್ ಧಾರವಾಡ ವಿರುದ್ಧ ದ್ವಿತೀಯ ಇನಿಂಗ್ ್ಸ ನಲ್ಲಿ 94 ರನ್ ಗಳಿಸಿದ್ದರು. ಆದಾಗ್ಯೂ ಉಪಾಧ್ಯಕ್ಷ ಇಲೆವೆನ್ ತಂಡ ಪಂದ್ಯದಲ್ಲಿ ಸೋಲುಂಡಿದ್ದು, ಸಮಿತ್ ಪ್ರಯತ್ನ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News