ಉಪಹಾರ್ ದುರಂತ : ಅನ್ಸಲ್ ಸೋದರರ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2020-02-20 05:49 GMT

ಹೊಸದಿಲ್ಲಿ, ಫೆ.20:  ಇಪ್ಪತ್ತಮೂರು  ವರ್ಷಗಳ ಹಿಂದೆ 59 ಜನರು ಸಾವಿಗೆ ಕಾರಣವಾದ ಉಪಹಾರ್ ಚಿತ್ರ ಮಂದಿರ   ಅಗ್ನಿ ದುರಂತಕ್ಕೆ  ಸಂಬಂಧಿಸಿ    ಚಿತ್ರ ಮಂದಿರದ ಮಾಲೀಕರಾದ  ಅನ್ಸಲ್ ಸಹೋದರರಾದ ಸುಶೀಲ್ ಮತ್ತು ಗೋಪಾಲ್ ಅನ್ಸಲ್ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಅವರು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಮತ್ತು ಅರುಣ್ ಮಿಶ್ರಾ ಅವರ ನ್ಯಾಯಪೀಠ ಗುರುವಾರ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತು . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಜೈಲು ಶಿಕ್ಷೆಯಿಂದ ಪಾರಾಗಲು  ಇಬ್ಬರು ಕೈಗಾರಿಕೋದ್ಯಮಿಗಳಿಗೆ ದೊಡ್ಡ ಪರಿಹಾರವಾಗಿದೆ.

ಉಪಹಾರ್  ಚಿತ್ರ ಮಂದಿರದ  ದುರಂತದಿಂದ ಸಂತ್ರಸ್ತರಾದವರ ಸಂಘಟನೆ  ಅಸೋಸಿಯೇಷನ್ ​​ಫಾರ್ ವಿಕ್ಟಿಮ್ಸ್ ಆಫ್  ಉಪಹಾರ್ ಟ್ರಾಜಿಡಿ (ಎವಿಯುಟಿ) ಯ ಕ್ಯುರೇಟಿವ್ ಅರ್ಜಿಯನ್ನು ಆಲಿಸುವಾಗ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲಿಸಲು ನಿರಾಕರಿಸಿತು.

ಮೂರು ನ್ಯಾಯಾಧೀಶರ ನ್ಯಾಯಪೀಠ, ಫೆಬ್ರವರಿ 9, 2017 ರಂದು 2: 1 ಬಹುಮತದ ತೀರ್ಪಿನ ಮೂಲಕ, 78 ವರ್ಷದ ಸುಶೀಲ್ ಅನ್ಸಾಲ್ ಅವರ " ವಯಸ್ಸಿಗೆ ಸಂಬಂಧಿಸಿದ ತೊಡಕುಗಳನ್ನು" ಪರಿಗಣಿಸಿ ಅವರಿಗೆ ಶಿಕ್ಷೆಯನ್ನು ವಿಧಿಸಿತ್ತು. 

ಆದಾಗ್ಯೂ, ಈ ಪ್ರಕರಣದಲ್ಲಿ ಉಳಿದ ಒಂದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ಸುಶೀಲ್ ಅನ್ಸಾಲ್ ಕಿರಿಯ ಸಹೋದರ ಗೋಪಾಲ್ ಅನ್ಸಾಲ್ ಗೆ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News