ಫ್ರೆಂಚ್ ಓಪನ್‌ನಿಂದ ಫೆಡರರ್ ದೂರ

Update: 2020-02-20 17:20 GMT

ಪ್ಯಾರಿಸ್, ಫೆ.20: ಇಪ್ಪತ್ತು ಗ್ರಾನ್ ಸ್ಲಾಮ್ ಪ್ರಶಸ್ತಿಗಳ ಒಡೆಯ, ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣದಿಂದಾಗಿ ಮೇ ತಿಂಗಳಲ್ಲಿ ನಡೆಯಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ದುಬೈ, ಇಂಡಿಯನ್ ವೆಲ್ಸ್ , ಬೊಗೊಟಾ ಮತ್ತು ಮಿಯಾಮಿ ಜೊತೆಗೆ ಇದೀಗ ಫ್ರೆಂಚ್ ಓಪನ್‌ನಿಂದಲೂ ಫೆಡರರ್ ದೂರ ಉಳಿಯುವ ಚಿಂತನೆ ನಡೆಸಿದ್ದಾರೆ.

 ಫೆಡರರ್ ಬಲ ಕಾಲಿಗೆ ಗಾಯ ಆಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಫೆಡರರ್ 2009ರಲ್ಲಿ ಒಂದು ಬಾರಿ ಮಾತ್ರ ರೊನಾಲ್ಡ್ ಗಾರೊಸ್‌ನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯ ಕಿರೀಟ ಧರಿಸಿದ್ದರು. ಫೆಡರರ್ ಕಳೆದ ಐದು ವರ್ಷಗಳಲ್ಲಿ ಒಂದು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಫೆಡರರ್ 2015ರ ಬಳಿಕ ಕಳೆದ ವರ್ಷ ಮೊದಲ ಬಾರಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.

 ಸ್ಪೇನ್‌ನ ರಫೆಲ್ ನಡಾಲ್ 13ನೇ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಲು ನೋಡುತ್ತಿದ್ದಾರೆ. ಅವರಿಗೆ ಫೆಡರರ್ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ಗ್ರಾನ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕಾಗಿದೆ. ಫೆಡರರ್ 20 ಗ್ರಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News