ಪಾಕಿಸ್ತಾನ ಝಿಂದಾಬಾದ್ ಘೋಷಣೆ: ವಿಶೇಷ ತನಿಖೆ ಕೈಗೊಂಡ ಪೊಲೀಸರು

Update: 2020-02-22 11:46 GMT

ಬೆಂಗಳೂರು, ಫೆ.22: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಬಂಧಿತವಾಗಿರುವ ಅಮೂಲ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿಶೇಷ ತಂಡದ ಮೂಲಕ ತನಿಖೆ ಕೈಗೊಂಡಿದ್ದಾರೆ.

ಇಲ್ಲಿನ ಉಪ್ಪಾರಪೇಟೆ ಬೆಂಗಳೂರಿನ ಎಸಿಪಿ ಮಹಾಂತ ರೆಡ್ಡಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸುರೇಶ್, ಸತೀಶ್ ಮತ್ತು ಕುಮಾರಸ್ವಾಮಿ ಸೇರಿ ಒಟ್ಟು 6 ಪೊಲೀಸ್ ಸಿಬ್ಬಂದಿಗಳು ವಿಶೇಷ ತನಿಖಾ ತಂಡದಲ್ಲಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ.ರಮೇಶ್ ಹೇಳಿದ್ದಾರೆ.

ಸದ್ಯ ಆರೋಪಿ ಅಮೂಲ್ಯಳ ನಿಕಟ ಸಂಪರ್ಕದಲ್ಲಿರುವ ಸ್ನೇಹಿತರ ವಿಚಾರಣೆ ಮಾಡಲಾಗುತ್ತಿದೆ. ಸ್ನೇಹಿತರ ವಿಚಾರಣೆ ಮಾಹಿತಿ ಕಲೆ ಹಾಕಿದ ಮೇಲೆ ಅಮೂಲ್ಯ ಹುಟ್ಟೂರಿಗೆ ತನಿಖಾ ತಂಡ ಹೋಗಲಿದೆ ಎನ್ನಲಾಗಿದ್ದು, ಆಕೆಯ ಹಳೇ ಭಾಷಣದ ವಿಡಿಯೋ ಮತ್ತು ಸಂಘಟನೆ ಮುಖಂಡರ ಸಂಪರ್ಕ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

ಇಮ್ರಾನ್ ಪಾಷಾ ಹೇಳಿಕೆ ದಾಖಲು

ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಪ್ರತಿಭಟನೆ ಆಯೋಜಕ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅನ್ನು ಶನಿವಾರ ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ವಿಚಾರಣೆಗೊಳಪಡಿಸಿ ಅವರ ಹೇಳಿಕೆ ದಾಖಲು ಮಾಡಿಕೊಂಡರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News